ಬುಧವಾರ, ಡಿಸೆಂಬರ್ 11, 2019
16 °C

ಏಕಾಂಗಿಯಾಗಿ ಯುದ್ಧವಿಮಾನ ಚಲಾಯಿಸಿದ ಮೊದಲ ಮಹಿಳೆ

ಪಿಟಿಐ Updated:

ಅಕ್ಷರ ಗಾತ್ರ : | |

ಏಕಾಂಗಿಯಾಗಿ ಯುದ್ಧವಿಮಾನ ಚಲಾಯಿಸಿದ ಮೊದಲ ಮಹಿಳೆ

ನವದೆಹಲಿ: ಮಿಗ್–21 ಯುದ್ಧವಿಮಾನವನ್ನು ಏಕಾಂಗಿಯಾಗಿ ಚಲಾಯಿಸಿದ ಮೊದಲ ಮಹಿಳೆ ಎಂಬ ಗೌರವಕ್ಕೆ ಅವನಿ ಚತುರ್ವೇದಿ ಪಾತ್ರರಾಗಿದ್ದಾರೆ.

ಅವನಿ ಅವರು ಗುಜರಾತ್‌ನ ಜಾಮ್‌ನಗರ ತರಬೇತಿ ಕೇಂದ್ರದಲ್ಲಿ ಸುಮಾರು 30 ನಿಮಿಷ  ಯುದ್ಧವಿಮಾನ ಚಲಾಯಿಸಿದರು ಎಂದು ವಾಯುಪಡೆ ತಿಳಿಸಿದೆ. ಅವನಿ ಮಧ್ಯಪ್ರದೇಶದ ರೇವ ಜಿಲ್ಲೆಯವರು.

ಮಹಿಳಾ ಪೈಲಟ್‌ಗಳಾದ ಅವನಿ ಚತುರ್ವೇದಿ, ಮೋಹನಾ ಸಿಂಗ್ ಮತ್ತು ಭಾವನಾ ಕಾಂತ್ ಅವರು  ಯುದ್ಧವಿಮಾನ ಚಲಾಯಿಸುವ ತರಬೇತಿ ಪಡೆಯುತ್ತಿದ್ದರು. 2016ರಲ್ಲಿ ಈ ಮೂವರನ್ನೂ  ಫ್ಲೈಯಿಂಗ್ ಆಫೀಸರ್ ಗಳಾಗಿ ನಿಯುಕ್ತಿಗೊಳಿಸಲಾಗಿತ್ತು.

ಪ್ರತಿಕ್ರಿಯಿಸಿ (+)