ಸೋಮವಾರ, ಡಿಸೆಂಬರ್ 9, 2019
24 °C

ರಿಯಾಲಿಟಿ ಶೋನಲ್ಲಿ ಬಾಲಕಿಗೆ ಮುತ್ತಿಟ್ಟ ಗಾಯಕ ಪಪೋನ್; ದೂರು ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಿಯಾಲಿಟಿ ಶೋನಲ್ಲಿ ಬಾಲಕಿಗೆ ಮುತ್ತಿಟ್ಟ ಗಾಯಕ ಪಪೋನ್; ದೂರು ದಾಖಲು

ನವದೆಹಲಿ: ರಿಯಾಲಿಟಿ ಶೋವೊಂದರಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಮುತ್ತಿಟ್ಟ ಗಾಯಕ ಅನುರಾಗ್ ಪಪೋನ್ ಮಹಾಂತಾ ವಿರುದ್ಧ ದೂರು ದಾಖಲಾಗಿದೆ. ರಿಯಾಲಿಟಿ ಶೋನಲ್ಲಿ ಹೋಳಿ ಹಬ್ಬದ ಆಚರಣೆ ನಡೆಯುತ್ತಿತ್ತು. ಆ ವೇಳೆ ಸ್ಪರ್ಧಾಳುಗಳೆಲ್ಲ ಬಣ್ಣ ಮೆತ್ತಿ ಸಂಭ್ರಮಿಸುತ್ತಿದ್ದಾಗ ಅದೇ ರಿಯಾಲಿಟಿ ಶೋ ತೀರ್ಪುಗಾರರಲ್ಲಿ ಒಬ್ಬರಾದ ಪಪೋನ್ ಸ್ಪರ್ಧಾಳು ಆಗಿದ್ದ ಬಾಲಕಿ ಬಳಿಗೆ ಹೋಗಿ ಆಕೆಯ ಮುಖಕ್ಕೆ ಬಣ್ಣ ಮೆತ್ತಿದ್ದಾರೆ. ಆಮೇಲೆ ಆಕೆಯ ಅನುಮತಿ ಇಲ್ಲದೆ ಮುತ್ತು ಕೊಟ್ಟಿದ್ದಾರೆ. ಇದೆಲ್ಲವೂ ಫೇಸ್‍ಬುಕ್‍ನಲ್ಲಿ ನೇರ ಪ್ರಸಾರವಾಗುತ್ತಿತ್ತು. ತಕ್ಷಣ ಇದನ್ನು ನೋಡಿದ ಛಾಯಾಗ್ರಾಹಕ ಇದೇನು ನಡೆಯುತ್ತಿದ್ದೆ ಎಂದು ಕೇಳಿದ ಕೂಡಲೇ, ಪಪೋನ್ ಮ್ಯೂಸಿಕ್ , ಮ್ಯೂಸಿಕ್ ಎಂದು ಹೇಳಿ ನಂತರ, ಬಂದ್ ಕರೋ ಯೇ, ಫೇಸ್‍ಬುಕ್ ಲೈವ್ ಚಲ್ ರಹಾ ಹೈ ಕ್ಯಾ (ನಿಲ್ಲಿಸಿ, ಫೇಸ್‍ಬುಕ್‍ನಲ್ಲಿ  ನೇರ ಪ್ರಸಾರವಾಗುತ್ತಿದೆಯೇ?) ಎಂದಿದ್ದಾರೆ. ಈ ವಿಡಿಯೊ ಈಗಲೂ ಪಪೋನ್ ಅವರ ಫೇಸ್‍ಬುಕ್ ಪೇಜ್‍ನಲ್ಲಿದೆ.

ಬಾಲಕಿಯ ಅನುಮತಿ ಇಲ್ಲದೆ ಮುತ್ತಿಟ್ಟ ಪಪೋನ್ ವಿರುದ್ಧ ಸುಪ್ರೀಂಕೋರ್ಟ್ ವಕೀಲರೊಬ್ಬರು ದೂರು ನೀಡಿದ್ದು, ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ (ಪೋಸ್ಕೊ)ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ವಾಯ್ಸ್ ಇಂಡಿಯಾ ಕಿಡ್ಸ್ ಎಂಬ ರಿಯಾಲಿಟಿ ಶೋನಲ್ಲಿ ಗಾಯಕ ಶಾನ್ ಮತ್ತು ಹಿಮೇಶ್ ರೆಷಮಿಯಾ ಜತೆ ಪಪೋನ್ ಕೂಡಾ ತೀರ್ಪುಗಾರರಾಗಿದ್ದಾರೆ.
ಪಪೋನ್ ವಿರುದ್ದ ದೂರು ನೀಡಿರುವ ವಕೀಲ ರುನಾ ಭುಯಾನ್,  ಪಪೋನ್ ಎಂಬ ಗಾಯಕ ಅಪ್ರಾಪ್ತ ಬಾಲಕಿಯ ಮುಖಕ್ಕೆ ಬಣ್ಣ ಮತ್ತೆ ಆಕೆಗೆ ಮುತ್ತಿಟ್ಟದ್ದನ್ನು ನೋಡಿ ನನಗೆ ಆಶ್ಚರ್ಯವಾಗಿದೆ. ರಿಯಾಲಿಟಿ ಶೋದಲ್ಲಿ ಭಾಗವಹಿಸುವ ಅಪ್ರಾಪ್ತ ಬಾಲಕಿಯರ  ಸುರಕ್ಷತೆ ಬಗ್ಗೆ ಚಿಂತಿಸುವಂತೆ ಮಾಡಿದೆ ಈ ವಿಡಿಯೊ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪಪೋನ್ ಅವರ ಮ್ಯಾನೇಜರ್ ಪಾರ್ಥ ಗೊಗೊಯ್, ಯಾವುದೇ ವ್ಯಕ್ತಿಯ ಭಾವನೆಗೆ ಧಕ್ಕೆ ತರುವಂತೆ ಅವರು ಮಾಡಿಲ್ಲ. ಅದು ಉದ್ದೇಶಪೂರ್ವಕ ಮಾಡಿದ್ದೂ ಅಲ್ಲ. ಹಾಗಾಗಿ ಅವರ ಫೇಸ್‍ಬುಕ್ ಅಧಿಕೃತ ಪುಟದಿಂದ ಆ ವಿಡಿಯೊ ಡಿಲೀಟ್ ಮಾಡಿಲ್ಲ ಎಂದಿದ್ದಾರೆ.

ಆದಾಗ್ಯೂ, ಈ ವಿಷಯವನ್ನು ದೊಡ್ಡದು ಮಾಡಬೇಡಿ ಎಂದು ಬಾಲಕಿಯ ಅಪ್ಪ ಹೇಳಿಕೆಯೊಂದನ್ನು ನೀಡಿರುವುದಾಗಿ ಗೊಗೊಯ್ ಹೇಳಿದ್ದಾರೆ. ಬರ್ಫಿ, ಬೇಫಿಕ್‍ರೇ, ಸುಲ್ತಾನ್, ದಮ್ ಲಗಾಕೇ ಹೈಷಾ, ಹಮಾರಿ ಅಧೂರಿ ಕಹಾನಿ ಮೊದಲಾದ ಚಿತ್ರದಲ್ಲಿ ಪಪೋನ್ ಹಾಡಿದ್ದಾರೆ.

ಪ್ರತಿಕ್ರಿಯಿಸಿ (+)