ಶುಕ್ರವಾರ, ಡಿಸೆಂಬರ್ 13, 2019
27 °C

ನೀರವ್‌ ಮೋದಿ ಬ್ರಾಂಡ್‌ ರಾಯಭಾರಿ ಸ್ಥಾನದಿಂದ ಹೊರಬರಲು ಪ್ರಿಯಾಂಕಾ ಚೋಪ್ರಾ ನಿರ್ಧಾರ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ನೀರವ್‌ ಮೋದಿ ಬ್ರಾಂಡ್‌ ರಾಯಭಾರಿ ಸ್ಥಾನದಿಂದ ಹೊರಬರಲು ಪ್ರಿಯಾಂಕಾ ಚೋಪ್ರಾ ನಿರ್ಧಾರ

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ(ಪಿಎನ್‌ಬಿ) ಬಹುಕೋಟಿ ವಂಚನೆ ಆರೋಪಿ ನೀರವ್‌ ಮೋದಿ ಅವರ ಬ್ರಾಂಡ್‌ ರಾಯಭಾರಿಯಾಗಿ ಮುಂದುವರಿಯದೆ ಒಪ್ಪಂದವನ್ನು ಮುರಿದುಕೊಳ್ಳಲು ನಟಿ ಪ್ರಿಯಾಂಕಾ ಚೋಪ್ರಾ ನಿರ್ಧರಿಸಿದ್ದಾರೆ.

ನೀರವ್‌ ಮೋದಿ ಬ್ರಾಂಡ್‌ ಉತ್ಪನ್ನದ ಆಭರಣಗಳ ರಾಯಭಾರಿಯಾಗಿದ್ದ ನಟಿ ಪ್ರಿಯಾಂಕಾ ಚೋಪ್ರಾ ಅವರು ರಾಯಭಾರಿ ಸ್ಥಾನದಿಂದ ಹೊರಬರಲು ನಿರ್ಧರಿಸಿದ್ದಾರೆ ಎಂದು ಪ್ರಿಯಾಂಕಾ ಚೋಪ್ರಾ ಅವರ ವಕ್ತಾರರು ತಿಳಿಸಿದ್ದಾರೆ.

₹11,300 ಕೋಟಿ ಮೊತ್ತದ ಪಿಎನ್‌ಬಿ ಹಗರಣ ಸಂಬಂಧ ದೂರು ದಾಖಲಿಸಿಕೊಂಡಿರುವ ಸಿಬಿಐ ಒಂಬತ್ತು ದಿನಗಳಿಂದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದು, ಅಪಾರ ಪ್ರಮಾಣದ ಆಸ್ತಿಯನ್ನು ಜಪ್ತಿ ಮಾಡಿದೆ.

ಪ್ರತಿಕ್ರಿಯಿಸಿ (+)