ಶಾಸಕರೂ ಸಾಯುತ್ತಾರೆ: ಸಚಿವ ಭಾರ್ಗವ

7

ಶಾಸಕರೂ ಸಾಯುತ್ತಾರೆ: ಸಚಿವ ಭಾರ್ಗವ

Published:
Updated:

ಸಾಗರ್ (ಮಧ್ಯಪ್ರದೇಶ): ಶಾಸಕರೂ ಸಾಯುತ್ತಾರೆ, ಅವರೇನೂ ಅಮರರಲ್ಲ ಎಂದು ರೈತರ ಸಾವು ಕುರಿತು ಮಧ್ಯಪ್ರದೇಶದ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಗೋಪಾಲ್ ಭಾರ್ಗವ ಹೇಳಿದ್ದಾರೆ. ಈ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.ಸಾಲಮನ್ನಾ, ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಮಧ್ಯಪ್ರದೇಶದಲ್ಲಿ ರೈತರು ಸುಧೀರ್ಘ ಪ್ರತಿಭಟನೆಗಳನ್ನು ನಡೆಸುತ್ತಿರುವ ಬಗ್ಗೆ ಅವರು ಈ ರೀತಿ ಪ್ರತಿಕ್ರಿಯೆ ನೀಡಿದರು. ನಷ್ಟ ಉಂಟಾದರೆ ಉದ್ಯಮಿಗಳು, ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ವಿದ್ಯಾರ್ಥಿಗಳೂ ಸಾಯುತ್ತಾರೆ, ಸಾವನ್ನು ಯಾರಿಂದಲಾದರೂ ತಡೆಯಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry