ಕಲಾಪದ ಗುಣಮಟ್ಟ ಕುಸಿತ: ಸಿ.ಎಂ ಬೇಸರ

6

ಕಲಾಪದ ಗುಣಮಟ್ಟ ಕುಸಿತ: ಸಿ.ಎಂ ಬೇಸರ

Published:
Updated:

ಬೆಂಗಳೂರು: 'ಕಲಾಪದ ಗುಣಮಟ್ಟ ಹೆಚ್ಚಾಗಬೇಕು. ಆದರೆ, ಅದು ದಿನೇ ದಿನೇ ಕುಸಿಯುತ್ತಿದೆ ಎನ್ನುವ ಭಾವನೆ ಸಾರ್ವಜನಿಕರಿಗೆ ಬಂದಿದೆ. ಇದನ್ನು ಹೋಗಲಾಡಿಸಿ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಬೇಕಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಲೇಖಾನುದಾನಕ್ಕೆ ಒಪ್ಪಿಗೆ ಪಡೆದು ಮಾತನಾಡಿದ ಅವರು, ‘ವಿಧಾನಸಭೆಗೆ ಹೋಲಿಸಿದರೆ ವಿಧಾನ ಪರಿಷತ್‌ನಲ್ಲಿ ಸದಸ್ಯರ ಹಾಜರಾತಿ ಚೆನ್ನಾಗಿದೆ. ಚರ್ಚೆಗೆ ಸಮಯವನ್ನು ಸದಸ್ಯರು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ, ಇದು ವಿಧಾನಸಭೆಯಲ್ಲಿ ಕಾಣಿಸುತ್ತಿಲ್ಲ. ಜನರಿಂದ ನೇರವಾಗಿ ಆಯ್ಕೆಯಾಗಿ ಬಂದಿರುವ ಕಾರಣಕ್ಕೇನೋ ಶಾಸಕರು ಹೆಚ್ಚು ಗೈರಾಗುತ್ತಿದ್ದಾರೆ ಎಂದರು.

‘ನಮ್ಮ ಸರ್ಕಾರದ ಅವಧಿಯಲ್ಲಿ ವಿಧಾನಸಭೆಯಲ್ಲಿ 244 ದಿನ ಮತ್ತು ವಿಧಾನ ಪರಿಷತ್‌ನಲ್ಲಿ 245 ದಿನಗಳು ಕಲಾಪ ನಡೆದಿದೆ. ವರ್ಷದಲ್ಲಿ 60 ದಿನ ಅಧಿವೇಶನ ನಡೆಸುವ ಕಾನೂನು ಮಾಡಿದ್ದೇವೆ. ಆದರೆ, ಅಷ್ಟು ದಿನಗಳು ನಡೆಯದಿರುವುದು ನನಗೂ ನೋವಿದೆ’ ಎಂದರು.

ನಿಯೋಗ ಕರೆದೊಯ್ಯಲು ಸಿದ್ಧ: ‘ಕಾವೇರಿ ಮತ್ತು ಮಹದಾಯಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ನ್ಯಾಯ ಕೇಳಲು ಪ್ರಧಾನಿ ಭೇಟಿ ಮಾಡಲು ಸಮಯ ನೀಡುವಂತೆ ಪತ್ರ ಬರೆದರೆ ಇದುವರೆಗೂ ಸಮಯ ನೀಡಿಲ್ಲ. ಪತ್ರಕ್ಕೂ ಸ್ಪಂದಿಸಿಲ್ಲ. ಪ್ರಧಾನಿ ಭೇಟಿಗೆ ಅವಕಾಶ ನೀಡಿದರೆ ರಾಜ್ಯದಿಂದ ಶಾಸಕರು ಮತ್ತು ಸಂಸದರ ನಿಯೋಗ ಕರೆದೊಯ್ಯಲು ಸಿದ್ಧನಿದ್ದೇನೆ’ ಎಂದು ಮುಖ್ಯಮಂತ್ರಿ, ಜೆಡಿಎಸ್‌ನ ಶ್ರಿಕಂಠೇಗೌಡರ ಪ್ರಶ್ನೆಗೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry