ವಿನಿವಿಂಕ್ ಶಾಸ್ತ್ರಿ ಬಂಧನ

7

ವಿನಿವಿಂಕ್ ಶಾಸ್ತ್ರಿ ಬಂಧನ

Published:
Updated:

ರಾಯಚೂರು: ಬಹುಕೋಟಿ ಹಗರಣದ ರೂವಾರಿ ಶ್ರೀನಿವಾಸ್‌ ಶಾಸ್ತ್ರಿ ಅಲಿಯಾಸ್‌ ವಿನಿವಿಂಕ್ ಶಾಸ್ತ್ರಿಯನ್ನು ನಗರದ ಸದರ್ ಬಜಾರ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ಪೊಲೀಸರು ಶಾಸ್ತ್ರಿಯನ್ನು ಬುಧವಾರ ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು. ಶಾಸ್ತ್ರಿಯನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು.

2005ರಲ್ಲಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಎಂಟು ತಿಂಗಳಿನಿಂದ ಸತತ ಗೈರು ಆಗಿ ತಲೆಮರೆಸಿಕೊಂಡಿದ್ದ.  ಒಟ್ಟು ₹1.65 ಕೋಟಿ ವಂಚನೆ ಮಾಡಿದ ಆರೋಪ ಆತನ ಮೇಲಿದೆ.

ಇದೇ ರೀತಿ ಬೆಂಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆ 11 ಪ್ರಕರಣ ಅವನ ವಿರುದ್ಧ ಇವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry