ಬಾಲ ಇಲ್ಲದ ಇಲಿ

7

ಬಾಲ ಇಲ್ಲದ ಇಲಿ

Published:
Updated:
ಬಾಲ ಇಲ್ಲದ ಇಲಿ

ಬಾಲ ಇಲ್ಲದ ಇಲಿಯೊಂದಿತ್ತು ಎಂಥಾ ಚಂದಿತ್ತಂತಿ!

ಬೆಕ್ಕಿನ ಮುಂದೆ ಓಡಾಡಿದ್ರು ನಡಿತಾಯಿತ್ತು ಸಂತಿ

ಮಜವಾಗಿತ್ತು ಇಲಿ ಎಂಥ ಮೈಯುಂಡಿತ್ತಂತಿ!

ಬೆಕ್ಕೇ ಇದಕೆ ಹೆದರತಿತ್ತ ಅಂದ್ರೆ! ಇನ್ನೇನೈತಿ ಚಿಂತಿ?

ಹಾಲು,ಬೆಣ್ಣೆ, ತುಪ್ಪ ತಿಂದು ಮಲ್ಗತಾಯಿತ್ತಂತೆ

ಸೌಟಿನೇಟು ತಿಂದೋಡೋ ಬೆಕ್ಕನ್ನೋಡಿ ನಗ್ತಿತ್ತಂತೆ!

ಮೀಸೆ ಮೂಡಿ ಮೂಗಿನ ಕೆಳಗೆ, ಮದುವೆ ಆಸೆ ಆಯ್ತಂತೆ!

ಕೊಡ್ದವರ‍್ಯಾರು ಕನ್ಯೆ? ಅಂತ, ವರವಾಗಿ ಹೋಯ್ತಂತೆ

ಹೋಯ್ತ ಹೋಯ್ತ ಹಣ್ಣು-ಹೂವು ಜೊತೇಲೆ ಒಯ್ದಿತಂತೆ

ಇಲಿ ಮನೆಯ ಹೊರಗೆ ನಿಂತು ಬರಂಗ ಆಯ್ತಂತೆ

ಒಳಗಡೆ ಹೋಗೋಕಾಸೆ ಆಸೆ ಏನೋ ಬೆಟ್ಟದಂಗೆ ಇತ್ತಂತೆ

ಬೆಟ್ಟದಲ್ಲಿದ್ರು ಇಲಿಗಳೆಲ್ಲ ಚಿಕ್ಕ ಚಿಕ್ಕ ಮನೇಲೆ ಇದ್ವಂತೆ

ಒಂದೇ ಎರಡೇ ನಾಲ್ಕು ಡಜನ್ ಕನ್ಯೆ ನೋಡ್ತಂತೆ

ಬಾಲವೆ ಇಲ್ಲದ ಧಡೂತಿ ಇಲಿಯನ್ನ ಯಾರೂ ಒಲ್ರಂತೆ

ಸಿಕ್ಕಾಪಟ್ಟೆ ಬೇಜಾರಾಯ್ತು ಯಾಕೆ ಗೊತ್ತಾಯ್ತೆ? ತನ್ನಂತ-

ಗಂಡಿಗೆ ಕನ್ಯ ಕೊಡ್ದವರ‍್ಯಾರು ಅಂತ ಭಾರಿ ಬೀಗಿತ್ತಂತೆ

ಮಾನ ಹೋಗಿ ಊಟ ಬಿಟ್ಟು ಮೂಲೇಲಿ ಮಲಗಿತ್ತಂತೆ

ಚಿಂತೆ ಹತ್ತಿ ಮಾಸದೊಳಗೆ ಮಾಸಿ ಹೋಗಿತ್ತಂತೆ

ಸಣಕಲು ದೇಹ ಹೊತ್ತು ತೆವಳುತ ಬಂತಂತೆ

ಸೊಕ್ಕಿದ ಬೆಕ್ಕು ಜಪ್ಪಿಸಿ ಗಪ್ಪನೆ ಚಂಗನೆ ಜಿಗಿದಿತ್ತಂತೆ

ಸತ್ತೇನೆಂದು ಪಕ್ಕದ ಬಿಲದಲಿ ಸರಕ್ಕನೆ ಸರಿದಿತ್ತಂತೆ

ಅಲ್ಲೇ ಇದ್ದ ಕುರೂಪಿ ಹೆಣ್ಣಿಲಿ ನಾಚಿಕೊಳ್ತಂತೆ!

ಇನ್ನೇನ ಮತ್ತೆ? ಪ್ರೀತಿ ಹುಟ್ದೆ ನಾಚಿಕೆ ಹುಟ್ಟುತ್ಯೇ?

ಪ್ರೀತಿ ಹುಟ್ಟಿದ ಮೇಲೆ ಗಂಡಿನ ಗರ್ವ ಉಳಿಯುತ್ಯೇ?

ಮದುವೆ ಏನೋ ಗುಟ್ಟಾಗಿ ಆದ್ರು ಹೆಣ್ಣು ಕೊಡ್ದವರ

ಮನೆ ಮುಂದೆ ಜಕ್ಕೊಂಡ ಹೋಯ್ತಂತೆ

ಪ್ರೀತಿ ಅಂದ್ರೆ ಸೌಂದರ್ಯ ಅಂತ ಬೇರೆ ಹೇಳ್ಬೇಕೆ

ಅಂತರಂಗ ತಿಳಕೊಂಡ ಮೇಲೆ ಪಾಠ ಏನೈತೆ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry