ಭಾರತಕ್ಕೆ ಮಾತ್ರ ಇಡೀ ಜಗತ್ತನ್ನು ಮುನ್ನಡೆಸುವ ಶಕ್ತಿ ಇದೆ: ಮೋಹನ್ ಭಾಗವತ್

7

ಭಾರತಕ್ಕೆ ಮಾತ್ರ ಇಡೀ ಜಗತ್ತನ್ನು ಮುನ್ನಡೆಸುವ ಶಕ್ತಿ ಇದೆ: ಮೋಹನ್ ಭಾಗವತ್

Published:
Updated:
ಭಾರತಕ್ಕೆ ಮಾತ್ರ ಇಡೀ ಜಗತ್ತನ್ನು ಮುನ್ನಡೆಸುವ ಶಕ್ತಿ ಇದೆ: ಮೋಹನ್ ಭಾಗವತ್

ಮೀರತ್: ‘ಭಾರತದಿಂದ ಮಾತ್ರ ಜಗತ್ತನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಲು ಸಾಧ್ಯ. ಹಾಗಾಗಿ ಹಿಂದೂಗಳು ಸದಾ ಒಗ್ಗಟ್ಟಿನಿಂದ ಬಾಳಬೇಕು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಉತ್ತರಪ್ರದೇಶದ ರಾಷ್ಟ್ರೋದಯ ಸಮ್ಮೇಳನ ಉದ್ದೇಶಿಸಿ ಸೋಮವಾರ ಮಾತನಾಡಿದ ಅವರು, ‘ರಾಷ್ಟ್ರದಲ್ಲಿರುವ ಪ್ರತಿಯೊಬ್ಬರಲ್ಲೂ ಒಗ್ಗಟ್ಟು ಇರಬೇಕು. ಭಾರತದ ಒಗ್ಗಟ್ಟಿನ ವಿರುದ್ಧದ ಪಿತೂರಿಗಳು ಹಿಂದೆಯೂ ನಡೆದಿತ್ತು. ಮುಂದೆಯೂ ಇರುತ್ತದೆ. ಇಂತಹ ಸಂದರ್ಭದಲ್ಲಿಯೂ ನಮ್ಮಲ್ಲಿನ ಏಕತೆಯನ್ನು ಉಳಿಸಿಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

‘ಎಲ್ಲಾ ಹಿಂದೂಗಳು ಒಂದು ಎಂಬುದನ್ನು ಹೆಮ್ಮೆಯಿಂದ ಹೇಳಬೇಕು. ಹಿಂದೂಗಳು ಏಕತೆಯಿಂದ ಬಾಳಬೇಕು. ಇದು ನಮ್ಮ ಕರ್ತವ್ಯ. ಏಕತೆಯಿಂದ ಮೂಲಕ ಎಲ್ಲಾ ಸಂಕೋಲೆಗಳನ್ನು ಕಿತ್ತೊಗೆಯಲು ಸಾಧ್ಯವಿದೆ. ಇದನ್ನು ಅರಿಯದಿದ್ದಲ್ಲಿ ಇಡೀ ಪ್ರಪಂಚ ನಮ್ಮಲ್ಲಿನ ಏಕತೆಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದುವರೆಗೆ ಆರ್‌ಎಸ್‌ಎಸ್‌ನಲ್ಲಿ 1ಲಕ್ಷದ 70 ಸಾವಿರ ಮಂದಿ ಸ್ವಯಂ ಸೇವಕರಿದ್ದಾರೆ. ಇವರೆಲ್ಲರೂ ರಾಷ್ಟ್ರ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಎಂದರು.

Meerut: RSS chief Mohan Bhagwat has said that only India can show the right path to the world and Hindus need to unite.

Addressing the 'Rashtroday Sammelan' in western Uttar Pradesh, Bhagwat had said on Sunday that everyone will have to unite for the country. He had added that there had been and there will be conspiracies against India's unity, but everyone will have to remain united.

Union ministers from western Uttar Pradesh Mahesh Sharma, Gen VK Singh, Satyapal Singh, and state ministers Chetan Chauhan and Dharam Singh Saini were present at the programme.

"All Hindus are one, say with pride we're one. Hindus must unite, this is our duty," Bhagwat had said and had stressed that if the country remains united, "we can cut through a lot of barriers."

"If we don't remain united, the whole world can take advantage of that," he had said. Praising RSS workers, he had pointed out that more than 1,70,000 volunteers are doing social service and they are willing to lay down their lives in the service of the nation.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry