ಟಿಎಂಸಿ ತೊರೆದ ಭುಟಿಯಾ

7

ಟಿಎಂಸಿ ತೊರೆದ ಭುಟಿಯಾ

Published:
Updated:
ಟಿಎಂಸಿ ತೊರೆದ ಭುಟಿಯಾ

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವನ್ನು ತೊರೆಯುವುದಾಗಿ ಹಿರಿಯ ಫುಟ್‌ಬಾಲ್ ಆಟಗಾರ ಬೈಚುಂಗ್ ಭುಟಿಯಾ ಘೋಷಿಸಿದ್ದಾರೆ.

‘ಟಿಎಂಸಿಯ ಸದಸ್ಯತ್ವ ಮತ್ತು ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದೇನೆ. ನಾನೀಗ ಯಾವ ರಾಜಕೀಯ ಪಕ್ಷದ ಸದಸ್ಯನೂ ಅಲ್ಲ’‍ ಎಂದು ಅವರು ಸೋಮ

ವಾರ ಟ್ವೀಟ್ ಮಾಡಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಲು ಪಕ್ಷ ನಿರಾಕರಿಸಿದೆ.

ಆದರೆ, ‘ಯಾವುದೇ ರಾಜಕೀಯ ಪಕ್ಷದಲ್ಲಿ ಇರಲು ಇಷ್ಟವಿಲ್ಲ ಎಂದು ಭುಟಿಯಾ ಒಂದು ತಿಂಗಳ ಹಿಂದೆಯೇ ಪಕ್ಷದ ಮುಖಂಡರಿಗೆ ತಿಳಿಸಿದ್ದರು’ ಎಂದು ಮೂಲಗಳು ಹೇಳಿವೆ.

ಭುಟಿಯಾ ಅವರು 2014ರಲ್ಲಿ ಲೋಕಸಭೆಗೆ ಮತ್ತು 2016ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ‌ಚುನಾವಣೆಗೆ ಟಿಎಂಸಿಯಿಂದ ಸ್ಪರ್ಧಿಸಿ ಸೋತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry