ಅಮಿತ್‌ ಶಾ ಬಗ್ಗೆ ಟೀಕಿಸಿದ್ದ ವಿದ್ಯಾರ್ಥಿಯ ಅಮಾನತು: ಪ್ರಕಾಶ್ ರೈ ಅಸಮಾಧಾನ

7

ಅಮಿತ್‌ ಶಾ ಬಗ್ಗೆ ಟೀಕಿಸಿದ್ದ ವಿದ್ಯಾರ್ಥಿಯ ಅಮಾನತು: ಪ್ರಕಾಶ್ ರೈ ಅಸಮಾಧಾನ

Published:
Updated:
ಅಮಿತ್‌ ಶಾ ಬಗ್ಗೆ ಟೀಕಿಸಿದ್ದ ವಿದ್ಯಾರ್ಥಿಯ ಅಮಾನತು: ಪ್ರಕಾಶ್ ರೈ ಅಸಮಾಧಾನ

ಬೆಂಗಳೂರು: ‘ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕಾಗಿ ನನ್ನ ದೇಶದ ಯುವಕರಿಗೆ ಬೆದರಿಕೆ ಹಾಕಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಅನೇಕ ಪ್ರಕರಣಗಳನ್ನು ನಾವು ಗಮನಿಸುತ್ತಿದ್ದೇವೆಯೇ.. ಮಾತನಾಡಲು ಮುಂದಾಗುವ ಯುವ ಮನಸ್ಸುಗಳಲ್ಲಿ ಹೇಗೆ ಭೀತಿಯನ್ನು ಹರಡಲಾಗುತ್ತಿದೆ ಎಂಬುದನ್ನು ನಾವು ನೋಡಿದ್ದೇವೆಯೇ.. #justasking’ ಎಂದು ನಟ ಪ್ರಕಾಶ್‌ ರೈ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಟೀಕಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜಿನ ವಿದ್ಯಾರ್ಥಿಯ ಅಮಾನತು ಪ್ರಕರಣವನ್ನು ಉಲ್ಲೇಖಿಸಿ ಅವರು ಈ ಟ್ವೀಟ್ ಮಾಡಿದ್ದಾರೆ. ವಿದ್ಯಾರ್ಥಿಯ ಅಮಾನತು ಸುದ್ದಿಯ ಪತ್ರಿಕಾ ವರದಿಗಳ ತುಣುಕುಗಳನ್ನೂ ಟ್ವಿಟರ್ ಜತೆ ಲಗತ್ತಿಸಿದ್ದಾರೆ.

‘ಬಂಡಲ್‌ ಶಾ’ ಎಂದ್ದಿದ್ದ ವಿದ್ಯಾರ್ಥಿ: ಕಾನೂನು ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಜಸ್ಟೀನ್ ಎಂಬುವವರು ಅಮಿತ್ ಶಾ ಅವರನ್ನು ‘ಬಂಡಲ್‌ ಶಾ’ ಎಂದು ಫೇಸ್‌ಬುಕ್‌ನಲ್ಲಿ ಟೀಕೆ ಮಾಡಿದ್ದರು. ಇದಕ್ಕಾಗಿ ಅವರನ್ನು 15 ದಿನಗಳ ಮಟ್ಟಿಗೆ ಕಾಲೇಜಿನಿಂದ ಅಮಾನತು ಮಾಡಲಾಗಿದೆ ಎಂದು ವರದಿಯಾಗಿತ್ತು. ಅಮಾನತಾಗಿರುವ ಜಸ್ಟೀನ್ ಕೊಕ್ಕಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಬಾಸ್ಟಿನ್‌ ಅವರ ಪುತ್ರ.

ಇದೇ ತಿಂಗಳ 20ರಂದು ಅಮಿತ್ ಶಾ ಅವರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry