ತೆಲಂಗಾಣ ಸಿ.ಎಂ ಚಂದ್ರಶೇಖರ್‌ ರಾವ್‌ ಹೆಲಿಕಾಪ್ಟರ್‌ನಲ್ಲಿ ಹೊಗೆ

7

ತೆಲಂಗಾಣ ಸಿ.ಎಂ ಚಂದ್ರಶೇಖರ್‌ ರಾವ್‌ ಹೆಲಿಕಾಪ್ಟರ್‌ನಲ್ಲಿ ಹೊಗೆ

Published:
Updated:
ತೆಲಂಗಾಣ ಸಿ.ಎಂ ಚಂದ್ರಶೇಖರ್‌ ರಾವ್‌ ಹೆಲಿಕಾಪ್ಟರ್‌ನಲ್ಲಿ ಹೊಗೆ

ಹೈದರಾಬಾದ್‌: ತೆಲಂಗಾಣ ಮುಖ್ಯಮಂತ್ರಿ ಕೆ. ಸಿ. ಚಂದ್ರಶೇಖರ್‌ ರಾವ್‌ ಅವರು ಮಂಗಳವಾರ ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್‌ನ ಸಂಪರ್ಕ ಸಾಧನ ಹೊಂದಿದ್ದ ಬ್ಯಾಗ್‌ನಿಂದ ಹೊಗೆ ಕಾಣಿಸಿಕೊಂಡ ಪರಿಣಾಮ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಅದಿಲಾಬಾದ್‌ ಜಿಲ್ಲೆಯ ಮರ್ಮುರ್‌ ಪ್ರದೇಶಕ್ಕೆ ಮಂಗಳವಾರ ಬೆಳಿಗ್ಗೆ 10.30ರ ಸುಮಾರಿಗೆ ರಾವ್‌ ಹೊರಟಿದ್ದರು. ಹೆಲಿಕಾಪ್ಟರ್‌ ಇನ್ನೇನು ಹಾರಾಟ ಆರಂಭಿಸಬೇಕು ಎನ್ನುವಾಗ ಸಂಪರ್ಕ ಸಾಧನವಿದ್ದ ಬ್ಯಾಗ್‌ನಿಂದ ಹೊಗೆ ಹೊರಬರುತ್ತಿರುವುದು ಭದ್ರತಾ ಅಧಿಕಾರಿಗೆ ಕಾಣಿಸಿದೆ. ತಕ್ಷಣವೇ ಅವರು ಹೆಲಿಕಾಪ್ಟರ್‌ನಿಂದ ಬ್ಯಾಗ್‌ ಹೊರತೆಗೆದಿದ್ದಾರೆ.

ನಂತರ ರಾವ್‌ ಅವರು ನಿಗದಿತ ವೇಳಾಪಟ್ಟಿಯಂತೆ ಪ್ರಯಾಣ ಬೆಳೆಸಿದರು.

‘ಘಟನೆ ಬಗ್ಗೆ ಮುಖ್ಯಮಂತ್ರಿ ಕಚೇರಿ ಸಿಬ್ಬಂದಿಯೊಂದಿಗೆ ಮಾತನಾಡಿದ್ದೇನೆ. ಮುಖ್ಯಮಂತ್ರಿಗಳಿಗೆ ಯಾವುದೇ ತೊಂದರೆಯಾಗಿಲ್ಲ ಹಾಗೂ ಅವರು ತಮ್ಮ ಪ್ರಯಾಣ ಮುಂದುವರಿಸಿದ್ದಾರೆ’ ಎಂದು ರಾವ್‌ ಅವರ ಮಗ ಹಾಗೂ ಐಟಿ–ಬಿಟಿ ಸಚಿವ ಕೆ. ತಾರಕ ರಾಮ ರಾವ್‌ ಅವರು ಟ್ವೀಟ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry