ಬಿಜೆಡಿ, ಕಾಂಗ್ರೆಸ್‌ಗೆ ಸಿಹಿ

7
ಒಡಿಶಾ, ಮಧ್ಯಪ್ರದೇಶ ಉಪ ಚುನಾವಣೆ

ಬಿಜೆಡಿ, ಕಾಂಗ್ರೆಸ್‌ಗೆ ಸಿಹಿ

Published:
Updated:
ಬಿಜೆಡಿ, ಕಾಂಗ್ರೆಸ್‌ಗೆ ಸಿಹಿ

ಭುವನೇಶ್ವರ/ಭೋಪಾಲ್: ಒಡಿಶಾದ ಒಂದು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಡಿ ಗೆಲುವು ಸಾಧಿಸಿದ್ದರೆ ಮಧ್ಯಪ್ರದೇಶದ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದೆ.

ಒಡಿಶಾದ ಬಿಜೇಪುರ್‌ನಲ್ಲಿ ರೀಟಾ ಸಾಹು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಶಾಸಕ ಸುಬಲ್ ಸಾಹು ಅವರ ನಿಧನದಿಂದಾಗಿ ಉಪ ಚುನಾವಣೆ ನಡೆದಿತ್ತು. ಸುಬಲ್ ಅವರ ಪತ್ನಿ ರೀಟಾ ಸಾಹು ಅವರು ಬಿಜೆಡಿಯಿಂದ ಸ್ಪರ್ಧಿಸಿದ್ದರು.

ಮಧ್ಯಪ್ರದೇಶದ ಮುಂಗಾಒಲಿ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬ್ರಜೇಂದ್ರ ಸಿಂಗ್ ಯಾದವ್ ಅವರು ಬಿಜೆಪಿಯ ಬಾಯಿಸಾಹಬ್ ಯಾದವ್ ಅವರನ್ನು 2,124 ಮತಗಳಿಂದ ಸೋಲಿಸಿದ್ದಾರೆ. ಕಳೆದ ಬಾರಿ ಇಲ್ಲಿ ಕಾಂಗ್ರೆಸ್ 20 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು. ಶಾಸಕ ಮಹೇಂದ್ರ ಸಿಂಗ್ ಕಲುಖೇಡ ತೀರಿಕೊಂಡಿದ್ದರು.

‘ಉಪ ಚುನಾವಣೆ ಫಲಿತಾಂಶವು ರಾಜ್ಯದಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆ ಮೇಲೆ ಪರಿಣಾಮ ಬೀರಲಿದೆ’ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹೇಳಿದ್ದಾರೆ.

ಎರಡೂ ರಾಜ್ಯಗಳಲ್ಲೂ ಫೆಬ್ರುವರಿ 24ರಂದು ಮತದಾನ ನಡೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry