ಸ್ಪೇಸ್‌ಎಕ್ಸ್‌ ರಾಕೆಟ್‌ನಲ್ಲಿ ಬ್ಯಾಕ್ಟೀರಿಯಾ?

7

ಸ್ಪೇಸ್‌ಎಕ್ಸ್‌ ರಾಕೆಟ್‌ನಲ್ಲಿ ಬ್ಯಾಕ್ಟೀರಿಯಾ?

Published:
Updated:
ಸ್ಪೇಸ್‌ಎಕ್ಸ್‌ ರಾಕೆಟ್‌ನಲ್ಲಿ ಬ್ಯಾಕ್ಟೀರಿಯಾ?

ವಾಷಿಂಗ್ಟನ್: ರಾಕೆಟ್‌ ಮತ್ತು ಗಗನನೌಕೆ ತಯಾರಿಸುವ ಅಮೆರಿಕದ ಖಾಸಗಿ ಸಂಸ್ಥೆ ಸ್ಪೇಸ್‌ಎಕ್ಸ್‌, ಫೆಬ್ರುವರಿ 6ರಂದು ಪ್ರಾಯೋಗಿಕ ಉಡಾವಣೆ ಮಾಡಿದ್ದ ರಾಕೆಟ್‌ನಲ್ಲಿ ಉಪಕರಣವಾಗಿ ಬಳಸಿದ್ದ ಕಾರು, ಬೃಹತ್ ಪ್ರಮಾಣದ ಬ್ಯಾಕ್ಟೀರಿಯಾ ಕೊಂಡೊಯ್ದಿರಬಹುದು ಎಂದು ವಿಜ್ಞಾನಿಗಳು ಶಂಕಿಸಿದ್ದಾರೆ.

ರಾಕೆಟ್‌ನ ಉಪಕರಣವಾಗಿ, ಸಂಸ್ಥೆಯ ಸಿಇಒ ಎಲಾನ್ ಮಸ್ಕ್‌ ಅವರ ಕೆಂಪು ಬಣ್ಣದ ಟೆಸ್ಲಾ ಕಾರನ್ನು ಬಳಸಲಾಗಿತ್ತು. ‘ಉಡಾವಣೆಗೊಂಡಿರುವ ರಾಕೆಟ್, ಇತರ ಗ್ರಹಗಳಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದು, ಅದು ಸೂಕ್ಷ್ಮಾಣುಜೀವಿ ಮುಕ್ತವಾಗಿದೆ. ಆದರೆ ಇದರಲ್ಲಿದ್ದ ಕಾರನ್ನು ಬೇರೆ ಗ್ರಹಗಳಲ್ಲಿ ಇಳಿಸುವ ಯಾವ ಯೋಜನೆಗಳೂ ಸಂಸ್ಥೆಗೆ ಇರಲಿಲ್ಲ. ಹಾಗಾಗಿ ಅದನ್ನು ಸ್ವಚ್ಛಗೊಳಿಸಿರಲಿಲ್ಲ. ಹೊರಭಾಗವನ್ನು ವಿಕಿರಣದಿಂದ ಸ್ವಚ್ಛಗೊಳಿಸಿದ್ದರೂ ಕಾರಿನ ಎಂಜಿನ್‌ ಮಾತ್ರ ಗಲೀಜಾಗಿಯೇ ಇರುತ್ತದೆ. ಹಾಗಾಗಿ ಅದರಲ್ಲಿ ಬ್ಯಾಕ್ಟೀರಿಯಾ ಉಳಿದುಕೊಂಡಿರುವ ಸಾಧ್ಯತೆ ಹೆಚ್ಚು. ಅಲ್ಲದೆ, ಸ್ವಚ್ಛಗೊಳಿಸುವುದು ಮತ್ತು ಸೂಕ್ಷ್ಮಾಣುಜೀವಿ ಮುಕ್ತಗೊಳಿಸುವುದು ಎರಡೂ ಬೇರೆ ಬೇರೆ ಪ್ರಕ್ರಿಯೆಗಳು’ ಎಂದು ಪ್ಯುರುಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೇ ಮೆಲೋಶ್ ತಿಳಿಸಿದ್ದಾರೆ.

‘ಒಂದು ವೇಳೆ ರಾಕೆಟ್‌ ಅನ್ಯ ಗ್ರಹದಲ್ಲಿ ಇಳಿದರೆ ಟೆಸ್ಲಾ ಕಾರಿನೊಳಗೆ ಇದ್ದ ಬ್ಯಾಕ್ಟೀರಿಯಾಗಳು ಆ ಗ್ರಹದ ವಾತಾವರಣದಲ್ಲಿ ಸೇರಿಕೊಂಡು, ಈ ಮೊದಲು ಅಲ್ಲಿ ಇರಬಹುದಾದ ಜೀವವೈವಿಧ್ಯವನ್ನು ಕಲುಷಿತಗೊಳಿಸುವ ಅಪಾಯವಿದೆ’ ಎಂದು ಮೆಲೋಶ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry