ಅಫ್ಗಾನಿಸ್ತಾನ: 30 ಮಂದಿಯ ಅಪಹರಣ, ಆರು ಮಂದಿ ಹತ್ಯೆ

7

ಅಫ್ಗಾನಿಸ್ತಾನ: 30 ಮಂದಿಯ ಅಪಹರಣ, ಆರು ಮಂದಿ ಹತ್ಯೆ

Published:
Updated:

ಕಂದಹಾರ್‌ (ಎಪಿ): ದಕ್ಷಿಣ ಅಫ್ಗಾನಿಸ್ತಾನದಲ್ಲಿ ನಡೆದ ಎರಡು ಪ್ರತ್ಯೇಕ ದಾಳಿ ಪ್ರಕರಣಗಳಲ್ಲಿ 30 ಮಂದಿಯನ್ನು ಅಪಹರಿಸಿದ್ದು, ಆರು ಮಂದಿಯನ್ನು ಹತ್ಯೆ ಮಾಡಲಾಗಿದೆ.

‘ದಾಳಿಕೋರರು ಪೊಲೀಸ್‌ ಹೊರ ಠಾಣೆಯ ಮೇಲೆ ನಡೆಸಿದ ದಾಳಿಯಲ್ಲಿ ಆರು ಮಂದಿ ಪೊಲೀಸರು ಹತ್ಯೆಯಾಗಿದ್ದು ಐವರಿಗೆ ಗಾಯಗಳಾಗಿವೆ. ಇದೇ ಸಮಯದಲ್ಲಿ ಸೇನಾ ಸಮವಸ್ತ್ರದಲ್ಲಿದ್ದ ಮತ್ತೊಂದು ತಂಡ ಬಸ್ಸೊಂದನ್ನು ತಡೆದು 19 ಮಂದಿ ಪೊಲೀಸರು ಸೇರಿ 30 ಮಂದಿ ಪ್ರಯಾಣಿಕರನ್ನು ಅಪಹರಿಸಿದ್ದಾರೆ’ ಎಂದು ಕಂದಹಾರ್‌ ಪೊಲೀಸ್‌ ಮುಖ್ಯಸ್ಥ ಜೆನ್‌ ಅಬ್ದುಲ್‌ ರಜಾಕ್‌ ಮಾಹಿತಿ ನೀಡಿದ್ದಾರೆ.

ಈ ಎರಡೂ ಪ್ರಕರಣಗಳು ಮಂಗಳವಾರ ರಾತ್ರಿ ಕಂದಹಾರ್‌ ಹಾಗೂ ಉರ್ಝಗನ್ ಗಡಿಯಲ್ಲಿ ನಡೆದಿವೆ. ದಾಳಿ ಸಂಬಂಧ ಯಾವ ಸಂಘಟನೆಯೂ ಹೊಣೆ ಹೊತ್ತುಕೊಂಡಿಲ್ಲ. ಆದರೆ, ತಾಲಿಬಾನ್‌ ಉಗ್ರರು ಈ ದಾಳಿಗಳನ್ನು ನಡೆಸಿರಬಹುದು ಎಂದು ರಜಾಕ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry