ಐಎಸ್‌ಎಲ್‌: ಅಂಜು ಕಿಡಿ

7

ಐಎಸ್‌ಎಲ್‌: ಅಂಜು ಕಿಡಿ

Published:
Updated:
ಐಎಸ್‌ಎಲ್‌: ಅಂಜು ಕಿಡಿ

ನವದೆಹಲಿ: ದೇಶದ ವಿವಿಧ ಕ್ರೀಡಾಂಗಣಗಳಲ್ಲಿ ಐಎಸ್‌ಎಲ್‌ ಪಂದ್ಯಗಳು ನಡೆಯುತ್ತಿರುವ ಕಾರಣ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ ಆಯೋಜಿಸಲು ಪರವಾನಗಿ ನಿರಾಕರಿಸಲಾಗುತ್ತಿದೆ ಎಂದು ಹಿರಿಯ ಲಾಂಗ್ ಜಂಪ್‌ ಪಟು ಅಂಜು ಬಾಬಿ ಜಾರ್ಜ್‌ ಆರೋಪಿಸಿದ್ದಾರೆ.

ಬೆಂಗಳೂರು, ನವದೆಹಲಿ ಮತ್ತು ಚೆನ್ನೈನಲ್ಲಿರುವ ಕ್ರೀಡಾಂಗಣಗಳು ಅಥ್ಲೆಟಿಕ್ಸ್‌ಗೆ ಪೂರಕವಾಗಿವೆ. ಆದರೆ ಈ ಕ್ರಿಡಾಂಗಣಗಳನ್ನು ಫುಟ್‌ಬಾಲ್‌ ಆಕ್ರಮಿಸಿಕೊಂಡಿದೆ. ಹೀಗಾಗಿ ಅಥ್ಲೆಟಿಕ್ ಕೂಟ ನಡೆಸುವುದಕ್ಕಾಗಲಿ ಅಭ್ಯಾಸ ನಡೆಸುವುದಕ್ಕಾಗಲಿ ಅವಕಾಶ ಇಲ್ಲ. ಆದ್ದರಿಂದ ಅಥ್ಲೀಟ್‌ಗಳು ಎಲ್ಲಿಗೆ ಹೋಗಬೇಕು ಎಂದು ಅವರು ಅಂಜು ಬಾಬಿ ಪ್ರಶ್ನಿಸಿದರು.

ಅಥ್ಲೆಟಿಕ್ಸ್‌ಗೆ ಸಂಬಂಧಿಸಿ ಸರ್ಕಾದರ ವೀಕ್ಷಕರಾಗಿರುವ ಅಂಜು ಪಟಿಯಾಲದಲ್ಲಿ ಮಾರ್ಚ್‌ ಐದರಿಂದ ನಡೆಯಲಿರುವ ಫೆಡರೇಷನ್‌ ಕಪ್‌ ಹಿರಿಯರ ಕ್ರೀಡಾಕೂಟದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕ್ರೀಡಾ ಇಲಾಖೆಯ ಬಗ್ಗೆ ಕಿಡಿ ಕಾರಿದರು.

ಭಾರತೀಯ ಅಥ್ಲೆಟಿಕ್ ಫೆಡರೇಷನ್‌ ಕಾರ್ಯದರ್ಶಿ ಸಿ.ಕೆ.ವಲ್ಸನ್‌ ಕೂಡ ಐಎಸ್‌ಎಲ್‌ಗೆ ಕ್ರೀಡಾಂಗಣಗಳನ್ನು ನೀಡಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದರು. ‘ದೆಹಲಿ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಫೆಡರೇಷನ್‌ ಕಪ್ ಚಾಂಪಿಯನ್‌ಷಿಪ್ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಅಲ್ಲಿ ಈಗ ಇದಕ್ಕೆ ಪೂರಕ ಪರಿಸ್ಥಿತಿ ಇಲ್ಲ. ಕಳೆದ ಬಾರಿಯೂ ಹೀಗೆಯೇ ಆಗಿತ್ತು’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry