ಯಾವ್ಯಾವ ಗಿಡ, ಎಲ್ಲೆಲ್ಲಿ ಇಡಬೇಕು

7

ಯಾವ್ಯಾವ ಗಿಡ, ಎಲ್ಲೆಲ್ಲಿ ಇಡಬೇಕು

Published:
Updated:
ಯಾವ್ಯಾವ ಗಿಡ, ಎಲ್ಲೆಲ್ಲಿ ಇಡಬೇಕು

* ಬಿಳಿ, ಕೆಂಪು, ಹಳದಿ ಕುಂಡಗಳಲ್ಲಿ ಬೆಳೆಯುವ ಗಿಡಗಳನ್ನು ಮನೆಯ ಲೀವಿಂಗ್‌ ರೂಂನಲ್ಲಿ ಇರಿಸಬೇಕು. ಮಾರುಕಟ್ಟೆಯಲ್ಲಿ ಒಳಾಂಗಣ ಗಿಡಗಳೆಂದೇ ಹಲವು ಆಕಾರದ, ಬಣ್ಣದ ಕುಂಡಗಳು ಲಭ್ಯವಿವೆ. ಇವುಗಳನ್ನು ಪೀಠೋಪಕರಣಗಳ ಮೇಲೆ ಇರಿಸಿ, ಮನೆಗೆ ಮೆರುಗು ನೀಡಬಹುದು.

* ಗಾಜಿನ ಬಾಟಲಿಗಳಲ್ಲಿ ಬೆಳೆಸಿದ ಗಿಡಗಳು ಮತ್ತು ಮನಿ ಪ್ಲ್ಯಾಂಟ್‌, ಬಿದಿರಿನ ಗಿಡಗಳನ್ನು ಡೈನಿಂಗ್‌ ಕೋಣೆಯ ಕಿಟಕಿಯ ಬಳಿ ಇರಿಸಬೇಕು.

* ಸನ್ಸೆವೇರಿಯಾ ಜಾತಿಗೆ ಸೇರಿದ ಗಿಡಗಳನ್ನು ಮಲಗುವ ಕೋಣೆಯಲ್ಲಿ ಇರಿಸಬೇಕು. ಇದು ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತದೆ. ಉತ್ತಮ ನಿದ್ರೆ ಆನಂದಿಸಲು ಹಾಸಿಗೆಯ ಎರಡೂ ಬದಿಯಲ್ಲಿ ಇರಿಸಬೇಕು.

* ಮನೆಯ ವಿಶಾಲ ಸ್ಥಳದಲ್ಲಿ, ಅಥವಾ ಬಾಲ್ಕನಿಯಲ್ಲಿ ಶೆಲ್ಫ್‌ ನಿರ್ಮಿಸಿ ಅದರ ಮೇಲೆ ಹೂವಿನ ಕುಂಡಗಳನ್ನು ಇರಿಸಬಹುದು. ಹೂವಿನ ಬಣ್ಣಕ್ಕೆ ಹೊಂದುವಂತೆ ಗೋಡೆಗೆ ಪೇಂಟ್‌ ಮಾಡಿಸಿ. ಪ್ರಾಣಿಯ ಕಲಾಕೃತಿಗಳನ್ನು ಇರಿಸುವ ಮೂಲಕ ಮನೆಯ ಪರಿಸರದ ಮೆರುಗು ಹೆಚ್ಚಿಸಬಹುದು.

* ಮನೆಯ ಖಾಲಿ ಸ್ಥಳದಲ್ಲಿ ಬಣ್ಣದ ಕುಂಡದಲ್ಲಿ ದೊಡ್ಡ ತಳಿಯ ಗಿಡವನ್ನು ನೆಟ್ಟರೆ ಚಂದ ಕಾಣುತ್ತದೆ.

* ಮನೆಯ ಬಾಲ್ಕನಿಯ ಕಿಟಕಿ ಬಳಿ ಜಾತಿಯ ಗಿಡ ಅಥವಾ ಸ್ನೇಕ್‌ ಪ್ಲ್ಯಾಂಟ್‌ಗಳನ್ನು ಇರಿಸಿ.

* ಹಳೆಯ ಮಣ್ಣಿನ ಪಾತ್ರೆಗಳನ್ನು ಬಳಸಿ ಒಳಾಂಗಣ ಗಿಡಗಳನ್ನು ಬೆಳೆಯಬಹುದು. ಇದನ್ನು ಅಡುಗೆ ಮನೆ, ಲೀವಿಂಗ್‌ ರೂಂ ಮತ್ತು ಬಚಲು ಮನೆಯಲ್ಲಿ ಇರಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry