'ದಿಗು' ಎಂದರೆ 'ದಿಕ್ಕೆಟ್ಟ ಗುಲಾಮ': ದಿನೇಶ್‌ ಗುಂಡೂರಾವ್‌ ವಿರುದ್ಧ ಬಿಜೆಪಿ ಟ್ವೀಟ್‌

ಮಂಗಳವಾರ, ಮಾರ್ಚ್ 19, 2019
26 °C

'ದಿಗು' ಎಂದರೆ 'ದಿಕ್ಕೆಟ್ಟ ಗುಲಾಮ': ದಿನೇಶ್‌ ಗುಂಡೂರಾವ್‌ ವಿರುದ್ಧ ಬಿಜೆಪಿ ಟ್ವೀಟ್‌

Published:
Updated:
'ದಿಗು' ಎಂದರೆ 'ದಿಕ್ಕೆಟ್ಟ ಗುಲಾಮ': ದಿನೇಶ್‌ ಗುಂಡೂರಾವ್‌ ವಿರುದ್ಧ ಬಿಜೆಪಿ ಟ್ವೀಟ್‌

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಕುರಿತು ನಮೋ ಎಂದರೆ ನಮಗೆ ಮೋಸ ಎಂದಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಬಿಜೆಪಿ ದಿಗು–ದಿಕ್ಕೆಟ್ಟ ಗುಲಾಮ ಎಂದು ಟೀಕಿಸಿದೆ.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ದಿನೇಶ್‌ ಗುಂಡೂರಾವ್‌, ಪ್ರಧಾನಿ ಮೋದಿ ಅವರು ಸೀದಾ ರುಪಯ್ಯ ಸರ್ಕಾರ್ ಎಂದು ಲೇವಡಿ ಮಾಡಿದ್ದನ್ನು ಪ್ರಸ್ತಾಪಿಸಿ, ನಮೋ ಎಂದರೆ ನಮಗೆ ಮೋಸ ಎಂದರ್ಥ. ನರೇಂದ್ರ ಮೋದಿ ಅವರೇ, ರೈತರಿಗೆ, ಯುವಕರಿಗೆ, ಎಲ್ಲರಿಗೂ ಮೋಸ ಮಾಡೋದು ನಿಲ್ಲಿಸಿ. ಕೆಲಸ ಮಾಡಿ’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ದಿನೇಶ್‌ ಗುಂಡೂರಾವ್‌ ಟೀಕೆಗೆ ಟ್ವಿಟರ್‌ನಲ್ಲಿ ತಿರುಗೇಟು ನೀಡಿರುವ ಬಿಜೆಪಿ, ದಿಗು ಎಂದರೆ ದಿಕ್ಕೆಟ್ಟ ಗುಲಾಮ ಎಂದು ಕರೆದಿದೆ. ದಿಗು ರವರೆ, ಗಾಂಧಿ ಕುಟುಂಬದ ಗುಲಾಮಗಿರಿ ಬಿಟ್ಟು, ಕನ್ನಡಿಗರಂತೆ ಸ್ವಾಭಿಮಾನದಿಂದ ಬದುಕುವುದನ್ನು ಕಲಿಯಿರಿ. ಇನ್ನೂ ನೀವೊಬ್ಬ ಯುವ ನಾಯಕ ಎಂಬ ಭ್ರಮೆಯಿಂದ ಹೊರಬಂದು ಪ್ರಬುದ್ಧ ರಾಜಕೀಯವನ್ನು ಇನ್ನಾದರೂ ಕಲಿಯಿರಿ ಎಂದು ಸಲಹೆಯನ್ನೂ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry