ಛತ್ತೀಸಗಡದಲ್ಲಿ ನಕ್ಸಲ್‌ ಕಾರ್ಯಾಚರಣೆ: ಪೊಲೀಸರಿಂದ 10 ನಕ್ಸಲರ ಹತ್ಯೆ

ಸೋಮವಾರ, ಮಾರ್ಚ್ 25, 2019
33 °C

ಛತ್ತೀಸಗಡದಲ್ಲಿ ನಕ್ಸಲ್‌ ಕಾರ್ಯಾಚರಣೆ: ಪೊಲೀಸರಿಂದ 10 ನಕ್ಸಲರ ಹತ್ಯೆ

Published:
Updated:
ಛತ್ತೀಸಗಡದಲ್ಲಿ ನಕ್ಸಲ್‌ ಕಾರ್ಯಾಚರಣೆ: ಪೊಲೀಸರಿಂದ 10 ನಕ್ಸಲರ ಹತ್ಯೆ

ರಾಯಪುರ: ಶುಕ್ರವಾರ ಬೆಳಗ್ಗೆ ಛತ್ತೀಸಗಡ ಮತ್ತು ತೆಲಂಗಾಣ ಪೊಲೀಸರು ನಕ್ಸಲರ ವಿರುದ್ಧ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 10 ನಕ್ಸಲರು ಮೃತಪಟ್ಟಿದ್ದಾರೆ.

ಛತ್ತೀಸಗಡದ ಬಿಜಾಪುರ ಜಿಲ್ಲೆಯ ನಕ್ಸಲ್‌ ಪೀಡಿತ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಇಲ್ಲಿನ ಪೂಜಾರಿ ಕಾಂಕರ್ ಅರಣ್ಯ ಪ್ರದೇಶದಲ್ಲಿ  ಬೆಳಗಿನ ಜಾವ 6.30ಕ್ಕೆ ನಡೆದ ಕಾರ್ಯಾಚರಣೆಯಲ್ಲಿ 10 ಜನ ನಕ್ಸಲರು ಮೃತಪಟ್ಟಿದ್ದಾರೆ. ಈ ವೇಳೆ ಪೊಲೀಸರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದು ಬಿಜಾಪುರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮೊಹಿತ್ ಗಾರ್ಗ್ ತಿಳಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ನಕ್ಸಲರ ಬಳಿ ಇದ್ದ ಅಪಾರ ಪ್ರಮಾಣದ ಮದ್ದು ಗುಂಡು, ನಾಡ ಬಾಂಬ್‌ ಮತ್ತು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೃತ ನಕ್ಸಲರ ಗುರುತು ಪತ್ತೆ ಹಚ್ಚುವ ಕೆಲಸ ಸಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry