ಟಾಟಾ ಬೋಯಿಂಗ್‌ ಏರೊಸ್ಪೇಸ್‌ ಉದ್ಘಾಟನೆ

7

ಟಾಟಾ ಬೋಯಿಂಗ್‌ ಏರೊಸ್ಪೇಸ್‌ ಉದ್ಘಾಟನೆ

Published:
Updated:
ಟಾಟಾ ಬೋಯಿಂಗ್‌ ಏರೊಸ್ಪೇಸ್‌ ಉದ್ಘಾಟನೆ

ಹೈದರಾಬಾದ್‌: ಟಾಟಾ ಬೋಯಿಂಗ್‌ ಏರೊಸ್ಪೇಸ್‌ಗೆ ಇಲ್ಲಿ ಚಾಲನೆ ನೀಡಲಾಯಿತು. ಯುದ್ಧಕ್ಕೆ ಬಳಕೆಯಾಗುವ ಎಎಚ್‌–64 ಅಪಾಚೆ ಹೆಲಿಕಾಪ್ಟರ್‌ಗಳ ಕವಚದ ವಾಣಿಜ್ಯ ತಯಾರಿಕೆ ಇಲ್ಲಿ ನಡೆಯಲಿದೆ. ಈ ವರ್ಷಾಂತ್ಯದ ವೇಳೆಗೆ ಕವಚದ ಪೂರೈಕೆ ಆರಂಭಗೊಳ್ಳಲಿದೆ.

ಅಮೆರಿಕದ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ ಕಾರ್ಪೊರೇಷನ್‌ ಮತ್ತು ಟಾಟಾ ಸಮೂಹಕ್ಕೆ ಸೇರಿದ ಟಾಟಾ ಅಡ್ವಾನ್ಸಡ್‌ ಸಿಸ್ಟಮ್ಸ್‌ನ (ಟಿಎಎಸ್‌ಎಲ್‌) ಜಂಟಿ ಯೋಜನೆ ಇದಾಗಿದೆ. ಈ ಘಟಕವು ಬೋಯಿಂಗ್‌ನ ಜಾಗತಿಕ ವಹಿವಾಟಿಗೆ ನೆರವಾಗಲಿದೆ. ಈ ಹೆಲಿಕಾಪ್ಟರ್‌ಗಳನ್ನು ಅಮೆರಿಕದ ಸೇನೆಯೂ ಸೇರಿದಂತೆ ವಿಶ್ವದಾದ್ಯಂತ ಮಾರಾಟ ಮಾಡಲಾಗುವುದು.

ರಕ್ಷಣಾ ವಲಯದಲ್ಲಿ ಗಮನಾರ್ಹ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಿರುವುದಕ್ಕೆ ಟಾಟಾ ಮತ್ತು ಬೋಯಿಂಗ್‌ ಸಂಸ್ಥೆಗಳಿಗೆ ಅಭಿನಂದಿಸು

ವುದಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು. ಈ ಘಟಕ ಸ್ಥಾಪನೆಗೆ ಹೂಡಿಕೆ ಮಾಡಿರುವ ಬಂಡವಾಳ ಬಹಿರಂಗಪಡಿಸಿಲ್ಲ. ಈ ಘಟಕದಲ್ಲಿ 350ಕ್ಕೂ ಹೆಚ್ಚು ತಂತ್ರಜ್ಞರು ಕಾರ್ಯನಿರ್ವಹಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry