ಚಿಣ್ಣರ ಊಟ

7

ಚಿಣ್ಣರ ಊಟ

Published:
Updated:
ಚಿಣ್ಣರ ಊಟ

ನನ್ನ ಹೆಸರು ಮಾಲಿ,

ಊಟದ ಕತೆಯ ಹೇಳುವೆನು

ಪುಟ್ಟ ಮಕ್ಕಳ ಕಿವಿಯಲ್ಲಿ...

ಗಮನವ ಕೊಟ್ಟು ನೀವ್ ಕೇಳಿ...

ತಿನ್ನುತಲಿದ್ದರೆ

ಪಿಜ್ಜಾ ಬರ್ಗರ್ಬ

ರುವುದು ಬೇಗನೆ ಕೊಬ್ಬು...

ಬುರುಬುರನೆಂದು

ಊದುತ ಹೋಗಿ

ಹೊಟ್ಟೆಯು ಆಯ್ತು ಡುಬ್ಬು...

ರಾಗಿಯ ಮುದ್ದೆ

ಜೋಳದ ರೊಟ್ಟಿ

ತಿಂದರೆ ಬರುವುದು ಶಕ್ತಿ...

ಮೊಳಕೆ ಕಾಳು

ಹಸಿರು ಸೊಪ್ಪು

ತಿಂದರೆ ಬೆಳೆವುದು ಯುಕ್ತಿ...

ಪ್ರತಿದಿನ ಸಂಜೆ

ಪಾನಿಪುರಿ ಗೋಬಿ

ತಿಂದರೆ ಬರುವುದು ರೋಗ...

ಹಾಲನು ಕುಡಿದು

ಹಣ್ಣನು ಕಡಿದರೆ

ಬೆಳೆಯುವೆ ನೀನು ಬೇಗ...

‌ಬಗೆಬಗೆ ಚಾಕ್ಲೇಟ್‌

ಬಣ್ಣದ ಐಸ್ ಕ್ರೀಮ್

ಸಾಕು ವಾರಕೆ ಬರಿ ಒಮ್ಮೆ...

ನೂಡಲ್ಸ್ ಬದಲು

ಶಾವಿಗೆ ಬೇಕೆಂದು

ತೋರು ನಿನ್ನಯ ಜಾಣ್ಮೆ...

ಮಾಲಿಯ ಮಾತನು ಕೇಳಿ

ಒಳ್ಳೆಯದನೆ ತಿಂದು ತೇಗಿ,

ಆಗಬಹುದು ನೀವ್ ಗಟ್ಟಿ

ಆರೋಗ್ಯಶಾಲಿ ಜಗಜಟ್ಟಿ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry