‘ಟ್ರಂಪ್‌ ನಿರ್ಧಾರ ಕಳವಳಕಾರಿ’

ಮಂಗಳವಾರ, ಮಾರ್ಚ್ 19, 2019
28 °C

‘ಟ್ರಂಪ್‌ ನಿರ್ಧಾರ ಕಳವಳಕಾರಿ’

Published:
Updated:
‘ಟ್ರಂಪ್‌ ನಿರ್ಧಾರ ಕಳವಳಕಾರಿ’

ಜಿನಿವಾ: ಉಕ್ಕು ಮತ್ತು ಅಲ್ಯುಮಿನಿಯಂ ಆಮದು ನಿರ್ಬಂಧ ವಿಧಿಸಲು ಗರಿಷ್ಠ ಪ್ರಮಾಣದಲ್ಲಿ ತೆರಿಗೆ ವಿಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ನಿರ್ಧಾರ ಕಳವಳಕಾರಿ ಎಂದು ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ) ತಿಳಿಸಿದೆ.

‘ಅಮೆರಿಕದ ನಿರ್ಧಾರಕ್ಕೆ ವಿಶ್ವ ವ್ಯಾಪಾರ ಸಂಘಟನೆ ಕಳವಳ ವ್ಯಕ್ತಪಡಿಸಿದೆ’ ಎಂದು ಸಂಘಟನೆಯ ಮಹಾ ನಿರ್ದೇಶಕ ರಾಬರ್ಟೊ ಅಜೆವೆದೊ ಹೇಳಿದ್ದಾರೆ.

‘ವಾಣಿಜ್ಯ ಸಮರ ನಡೆಸಲು ಯಾವ ದೇಶವೂ ಆಸಕ್ತಿ ತೋರಿಸುವುದಿಲ್ಲ. ಡಬ್ಲ್ಯುಟಿಒ ಪರಿಸ್ಥಿತಿಯನ್ನು ಗಮನಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

ಯಾವ ದೇಶಗಳ ವಿರುದ್ಧ ತೆರಿಗೆ ವಿಧಿಸಲಾಗುವುದು ಎಂಬುದನ್ನು ಟ್ರಂಪ್‌ ಖಚಿತಪಡಿಸಿಲ್ಲ. ಆದರೆ ಅವರ ನಿರ್ಧಾರದಿಂದ ಮಿತ್ರ ರಾಷ್ಟ್ರಗಳಾದ ಕೆನಡಾ, ಐರೋಪ್ಯ ಒಕ್ಕೂಟ, ಮೆಕ್ಸಿಕೊ ಮತ್ತು ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ ಉಕ್ಕು ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ಚೀನಾ ಜೊತೆಗಿನ ಸಂಬಂಧಗಳಿಗೆ ಪೆಟ್ಟು ಬೀಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry