ಜರ್ಮನಿ: ಮರ್ಕೆಲ್‌ ಜತೆ ಮೈತ್ರಿಗೆ ಒಪ್ಪಿದ ಎಸ್‌ಪಿಡಿ

7

ಜರ್ಮನಿ: ಮರ್ಕೆಲ್‌ ಜತೆ ಮೈತ್ರಿಗೆ ಒಪ್ಪಿದ ಎಸ್‌ಪಿಡಿ

Published:
Updated:
ಜರ್ಮನಿ: ಮರ್ಕೆಲ್‌ ಜತೆ ಮೈತ್ರಿಗೆ ಒಪ್ಪಿದ ಎಸ್‌ಪಿಡಿ

ಬರ್ಲಿನ್‌: ಜರ್ಮನಿಯ ಎರಡನೇ ಅತಿ ದೊಡ್ಡ ಪಕ್ಷವಾದ ಸೋಷಿಯಲ್ ಡೆಮಾಕ್ರಟಿಕ್‌ ಪಕ್ಷದ (ಎಸ್‌ಪಿಡಿ) ಸದಸ್ಯರು ಭಾನುವಾರ ನಡೆದ ಅಭಿಪ್ರಾಯ ಸಂಗ್ರಹದಲ್ಲಿ, ಚಾನ್ಸೆಲರ್ ಏಂಜೆಲಾ ಮರ್ಕೆಲ್‌ ಅವರ ಮೈತ್ರಿಕೂಟ ಸೇರಲು ನಿರ್ಧರಿಸಿದ್ದು, ಮರ್ಕೆಲ್‌ ಅವರು ನಾಲ್ಕನೆ ಅವಧಿಗೆ ಮುಂದುವರಿಯಲು ಹಸಿರು ನಿಶಾನೆ ತೋರಿದಂತಾಗಿದೆ.

ಮರ್ಕೆಲ್‌ ಅವರು 12 ವರ್ಷ ಅಧಿಕಾರದಲ್ಲಿದ್ದು (ಮೂರು ಅವಧಿ), ಮಹಾಮೈತ್ರಿ ಮಾಡಿಕೊಳ್ಳುವ ಮೂಲಕ ನಾಲ್ಕನೇ ಅವಧಿಗೂ ಮುಂದುವರಿಯಲು ಇಚ್ಛಿಸಿದ್ದಾರೆ. ಆದರೆ ಇದನ್ನು ಪೂರೈಸಿಕೊಳ್ಳಲು ಅವರು ಮಿತ್ರಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅಗತ್ಯವಿದೆ.

ಎಸ್‌ಪಿಡಿ ಹಿಂದಿನ ಅನೇಕ ಚುನಾವಣೆಗಳಲ್ಲಿ ಸೋತಿದ್ದು, ಮರ್ಕೆಲ್‌ ಅವರಿಗೆ ಇನ್ನೊಂದು ಅವಧಿ ದೊರಕಬಾರದು ಎಂದೇ ಈ ಮೊದಲು ಇಚ್ಛಿಸಿತ್ತು. ಇತರ ಎರಡು ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಮರ್ಕೆಲ್‌ ಅವರ ಯೋಜನೆ ವಿಫಲವಾದ ನಂತರ, ಎಸ್‌ಪಿಡಿ ತನ್ನ ನಿಲುವು ಬದಲಾಯಿಸಿಕೊಂಡಿದೆ.

‘ಮೈತ್ರಿ ಬಗ್ಗೆ ನಮಗೆ ಇದೀಗ ಸ್ಪಷ್ಟತೆ ದೊರಕಿದೆ. ಮುಂದಿನ ಸರ್ಕಾರದಲ್ಲಿ ಎಸ್‌ಪಿಡಿ ಇರಲಿದೆ. ಪಕ್ಷದ ತಲಾ ಮೂವರು ಮಹಿಳೆಯರು ಮತ್ತು ಪುರುಷರು ಸಚಿವ ಸಂಪುಟ ಸೇರುವ ವಿಶ್ವಾಸವಿದೆ’ ಎಂದು ಪಕ್ಷದ ಹಂಗಾಮಿ ಅಧ್ಯಕ್ಷ ಒಲಫ್ ಸ್ಕೊಲ್ಜ್‌ ತಿಳಿಸಿದ್ದಾರೆ.

ಎಸ್‌ಪಿಡಿಯ ಬೆಂಬಲದೊಂದಿಗೆ ಮರ್ಕೆಲ್‌ ಅವರು ಮಾರ್ಚ್‌ ಮಧ್ಯಭಾಗದಲ್ಲಿ ನಾಲ್ಕನೇ ಬಾರಿಗೆ ಸರ್ಕಾರ ರಚಿಸುವ ಸಾಧ್ಯತೆಯಿದೆ. ಆದರೆ ಕನ್ಸರ್ವೇಟಿವ್‌ ಮತ್ತು ಎಸ್‌ಪಿಡಿ ಎರಡೂ ಪಕ್ಷಗಳು ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಸೀಟುಗಳನ್ನು ಹೊಂದಿವೆ. ಒಟ್ಟು 709ರಲ್ಲಿ 399 ಸೀಟುಗನ್ನು ಗೆದ್ದಿವೆ. ಅಂದರೆ ಶೇಕಡ 56ರಷ್ಟು ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry