ಶಿಲ್ಪವನದಲ್ಲಿ ಕವನದ ಗುಂಗು, ಕುಂಚದ ರಂಗು

7

ಶಿಲ್ಪವನದಲ್ಲಿ ಕವನದ ಗುಂಗು, ಕುಂಚದ ರಂಗು

Published:
Updated:
ಶಿಲ್ಪವನದಲ್ಲಿ ಕವನದ ಗುಂಗು, ಕುಂಚದ ರಂಗು

ಬೆಂಗಳೂರು: ಚಿತ್ರ ಕಲಾವಿದೆಯರ ಕುಂಚದಲ್ಲಿ ಮೂಡಿದ ರಂಗು ರಂಗಿನ ಚಿತ್ತಾರಗಳು ಒಂದೆಡೆ ಹಾಗೂ ಕವಯತ್ರಿಯರ ಕವನ ವಾಚನ ಇನ್ನೊಂದೆಡೆ. ಇಲ್ಲಿ ಸೇರಿದ್ದವರಿಗೆ ಇವೆರಡರ ಮಿಳಿತ ಹೊಸ ರಸಾನುಭವವನ್ನು ನೀಡಿತು.

35 ಕಲಾವಿದೆಯರ ಕೈಚಳಕದಲ್ಲಿ ಅರಳಿದ ಚಿತ್ರ ಕಲಾಕೃತಿಗಳು ನೂರಾರು ಅರ್ಥಗಳನ್ನು ಧ್ವನಿಸುತ್ತಿದ್ದವು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಆರ್ಟ್‌ ಪಾರ್ಕ್‌ ಸಂಸ್ಥೆಯು ರವೀಂದ್ರ ಕಲಾಕ್ಷೇತ್ರ ಆವರಣದ ಶಿಲ್ಪವನದಲ್ಲಿ ಭಾನುವಾರ ಆಯೋ

ಜಿಸಿದ್ದ ‘ಮಹಿಳೆಯರ ಕಲಾಕೃತಿಗಳ ಪ್ರದರ್ಶನ’ದಲ್ಲಿ ಕಂಡುಬಂದ ದೃಶ್ಯವಿದು.

ಕವಯತ್ರಿಗಳಾದ ಮಮತಾ ಸಾಗರ್‌ ಮತ್ತು ಪದ್ಮಾವತಿ ರಾವ್‌ ಅವರ ಕವನಗಳ ಜುಗಲ್‌ಬಂದಿ ಸಭಿಕರ ಮನ ಗೆದ್ದಿತು. ಇಬ್ಬರೂ ತಮ್ಮ ಕವಿತೆ ಓದುತ್ತಾ,

ನಟನೆಯನ್ನೂ ಮಾಡಿದ್ದು ವಿಶೇಷವಾಗಿತ್ತು.

‘ಸೀಸನಾಟೊ’, ‘ನನ್ನ ಅಮ್ಮ ನನ್ನ ಅಮ್ಮನೇ’ ಎಂಬ ಕವಿತೆಗಳನ್ನು ವಾಚಿಸಿದ ಚಾಂದಿನಿ, ‘ಕವಯಿತ್ರಿಯರಿಗೆ ಇದು ಒಳ್ಳೆಯ ವೇದಿಕೆ’ ಎಂದರು.

ಮಹಿಳೆ ಮೇಲಿನ ದೌರ್ಜನ್ಯ, ಪರಿಸರ ಮಾಲಿನ್ಯ, ವ್ಯಕ್ತಿಚಿತ್ರ ಸೇರಿದಂತೆ ಅನೇಕ ವಿಷಯಗಳ ಕುರಿತ ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಕೆಲವರು ಸ್ಥಳದಲ್ಲೇ ಚಿತ್ರಗಳನ್ನು ಬರೆದರು.

ಕಲಾವಿದೆ ನಳಿನಿ ಕಿರಣ್‌ ಕುಮಾರ್‌ ಅವರು ಬಣ್ಣದ ಪೆನ್ಸಿಲ್‌ ಬಳಸಿ ಗಣಪನ ಚಿತ್ರಗಳನ್ನು ಬಿಡಿಸುತ್ತಿದ್ದರು.

‘ಸಾಂಪ್ರದಾಯಿಕ ಕಲೆಗೆ ಸಾಮಾನ್ಯವಾಗಿ ಜಲವರ್ಣ, ತೈಲವರ್ಣ ಬಳಸುತ್ತಾರೆ. ಆದರೆ, ಬಣ್ಣದ ಪೆನ್ಸಿಲ್‌ ಬಳಸುವುದು ಕಡಿಮೆ. ಭಿನ್ನ ಪ್ರಯತ್ನ ಮಾಡುವ ಹಾಗೂ ಸಮಯದ ಉಳಿತಾಯದ ದೃಷ್ಟಿಯಿಂದ ಪೆನ್ಸಿಲ್‌ನಲ್ಲಿ ಚಿತ್ರ ಬಿಡಿಸುತ್ತಿದ್ದೇನೆ. 40 ವಿಧದ ಗಣಪನ ಚಿತ್ರಗಳನ್ನು ರಚಿಸುವ ಉದ್ದೇಶವಿದೆ’ ಎಂದು ನಳಿನಿ ತಿಳಿಸಿದರು.‌

ಕಲಾವಿದೆ ಪೂರ್ಣಿಮಾ, ‘ಅಚ್ಚುಕಲೆ (ಗ್ರಾಫಿಕ್ಸ್‌) ವಿಧಾನದಲ್ಲಿ ಮಾಡಿದ ಕಲಾಕೃತಿಗಳನ್ನು ಪ್ರದರ್ಶನಕ್ಕಿಟ್ಟಿದ್ದೇನೆ. ಈ ಮಾಧ್ಯಮಕ್ಕೆ ಒಳ್ಳೆಯ ಬೇಡಿಕೆ ಇದೆ. ಹೆಚ್ಚಿನ ಕಲಾಕೃತಿಗಳು ಮಾರಾಟವಾಗುತ್ತಿವೆ’ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಲೇಖಕಿ ಶಶಿ ದೇಶಪಾಂಡೆ, ‘ಚಿತ್ರ ಬರೆದ ಮಾತ್ರಕ್ಕೆ ಅದು ಮಾರಾಟವಾಗಿ ಹಣಬರುತ್ತದೆ ಎಂಬ ಖಾತರಿ ಇಲ್ಲ. ಚಿತ್ರ

ಕಲಾವಿದರಿಗೆ ಪರಿಶ್ರಮ, ತಾಳ್ಮೆ ಇದ್ದರೆಮಾತ್ರ ಸಾಧನೆ ಮಾಡಲು ಸಾಧ್ಯ. ಅತ್ಯುತ್ತಮ ಕಲಾವಿದರಾಗಿ ಹೊರಹೊಮ್ಮಿದ ಬಳಿಕ ಕಲಾಕೃತಿಗಳಿಗೂ ಬೇಡಿಕೆ ಬರುತ್ತವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry