ಡೀಸೆಲ್ ಟ್ಯಾಂಕರ್‌ಗಳ ಪಲ್ಟಿ: ತಪ್ಪಿದ ಭಾರಿ ಅನಾಹುತ

7

ಡೀಸೆಲ್ ಟ್ಯಾಂಕರ್‌ಗಳ ಪಲ್ಟಿ: ತಪ್ಪಿದ ಭಾರಿ ಅನಾಹುತ

Published:
Updated:

ಸಿರವಾರ: ಡೀಸೆಲ್ ತುಂಬಿದ್ದ ಎರಡು ಟ್ಯಾಂಕರ್ ಲಾರಿಗಳು ಪಲ್ಟಿಯಾದ ಘಟನೆ ಪಟ್ಟಣ ಹೊರವಲಯದ ಸಿರವಾರ- ದೇವದುರ್ಗ ಮುಖ್ಯ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಸಿರವಾರ ಮೂಲಕ ದೇವದುರ್ಗ ಕಡೆ ಡೀಸೆಲ್ ತುಂಬಿಕೊಂಡು ಹೊರಟಿದ್ದ ಲಾರಿ ಪಲ್ಟಿಯಾಗಿದ್ದು, ನಂತರ ಇದರ ಮುಂದೆ ಹೊರಟಿದ್ದ ಇನ್ನೊಂದು ಟ್ಯಾಂಕರ್ ಲಾರಿಯು ಹಳ್ಳಕ್ಕೆ ಬಿದ್ದ ಲಾರಿಯನ್ನು ನೋಡಲು ಹೋಗಿ ಆಯಾ ತಪ್ಪಿ ಅದು ಕೂಡ ಪಲ್ಟಿಯಾಗಿದೆ.

ಘಟನಾ ಸ್ಥಳಕ್ಕೆ ಪಿಎಸ್ಐ ಸಾಬಯ್ಯ ನಾಯಕ ಭೇಟಿ ನೀಡಿ ನಂತರ ಸಿಪಿಐ ಚಂದ್ರಶೇಖರ ನೇತೃತ್ವದಲ್ಲಿ ಅರಕೇರಾ ಅಗ್ನಿ ಶಾಮಕ ದಳದ ಸಿಬ್ಬಂದಿ ಮತ್ತು ಕ್ರೇನ್, ಜೆಸಿಬಿ ಯಂತ್ರಗಳ ಸಹಾಯದಿಂದ ನಾಲ್ಕು ಗಂಟೆಗಳ ಸತತ ಪರಿಶ್ರಮದಿಂದ ಬಿದ್ದ ಟ್ಯಾಂಕರ್ ಲಾರಿಗಳನ್ನು ಮೇಲೆತ್ತಲಾಯಿತು.

ಈ ಕುರಿತು ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry