ಶಿರಸಿ: ವಿದ್ಯುತ್ ಶಾಕ್‌ಗೆ ಆನೆ ಬಲಿ

7

ಶಿರಸಿ: ವಿದ್ಯುತ್ ಶಾಕ್‌ಗೆ ಆನೆ ಬಲಿ

Published:
Updated:
ಶಿರಸಿ: ವಿದ್ಯುತ್ ಶಾಕ್‌ಗೆ ಆನೆ ಬಲಿ

ಶಿರಸಿ: ಉತ್ತರ ಕನ್ನಡ ಜಿಲ್ಲೆ ಬೆಡಸಗಾಂವ ಬಳಿ ಕರಕಲಜಡ್ಡಿಯಲ್ಲಿ ವಿದ್ಯುತ್‌ ಪ್ರವಹಿಸಿ ಆನೆ ಬಲಿಯಾಗಿದೆ.

ಶಿರಸಿ ಮುಂಡಗೋಡ ತಾಲ್ಲೂಕುಗಳ ಗಡಿ ಭಾಗದಲ್ಲಿ ಈ ಘಟನೆ ನಡೆದಿದೆ. ಹೈಟೆನ್ಶನ್ ವಿದ್ಯುತ್ ತಂತಿ ಹಸಿ ಗಿಡಕ್ಕೆ ತಾಗಿದ್ದು, ಅದನ್ನು ಮುಟ್ಟಿದ ಆನೆ ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಮುಂಡಗೋಡ ಎಸಿಎಫ್ ಜಿ.ಆರ್.ಶಶಿಧರ ಭೇಟಿ. ಕೆಲ ದಿನಗಳ ಹಿಂದೆ ಮೃತಪಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸುಮಾರಿ ಹತ್ತು ವರ್ಷದ ಹೆಣ್ಣಾನೆ ಎನ್ನುವ ಮಾಹಿತಿ ದೊರೆತಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅಂದಾಜು 10 ವರ್ಷದ ಒಂಟಿ ಹೆಣ್ಣಾನೆ ಶಿರಸಿ ತಾಲ್ಲೂಕಿನ ಉಲ್ಲಾಳದಲ್ಲಿ ಶನಿವಾರ ಮೃತಪಟ್ಟಿತ್ತು. ಭಾನುವಾರ ಅದರ ಅಂತ್ಯ ಸಂಸ್ಕಾರ ನಡೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry