ಸುನಿಲ್‌ ಆರತಕ್ಷತೆಯಲ್ಲಿ ಹಾಕಿ ಆಟಗಾರರು

7

ಸುನಿಲ್‌ ಆರತಕ್ಷತೆಯಲ್ಲಿ ಹಾಕಿ ಆಟಗಾರರು

Published:
Updated:
ಸುನಿಲ್‌ ಆರತಕ್ಷತೆಯಲ್ಲಿ ಹಾಕಿ ಆಟಗಾರರು

ಮಡಿಕೇರಿ: ರಾಷ್ಟ್ರೀಯ ಹಾಕಿ ತಂಡದ ಆಟಗಾರ, ಕೊಡಗಿನ ಎಸ್‌.ವಿ.ಸುನಿಲ್‌– ನಿಶಾ ಅವರ ಆರತಕ್ಷತೆ ನಗರದ ಕಾವೇರಿ ಹಾಲ್‌ನಲ್ಲಿ ಸೋಮವಾರ ರಾತ್ರಿ ನಡೆಯಿತು.

ಆರತಕ್ಷತೆಯಲ್ಲಿ ರಾಷ್ಟ್ರೀಯ ಹಾಕಿ ತಂಡದ ಆಟಗಾರರಾದ ಮನ್‌ಪ್ರಿತ್‌ಸಿಂಗ್‌, ಶ್ರೀಜೇಶ್, ಬಿರೇಂದ್ರ ಲಕ್ರಾ, ಹರ್ಮನ್‌ ಪ್ರೀತ್‌, ಮನ್‌ದೀಪ್‌ ಸಿಂಗ್‌, ಸದ್ಬೀರ್‌ ಸಿಂಗ್‌, ಆಕಾಶ್‌ ದೀಪ್‌, ಸುಮಿತ್‌, ರಘುನಾಥ್‌, ವಿ.ಎಸ್‌.ವಿನಯ್‌, ಹರಿಪ್ರಸಾದ್‌, ವಿಕ್ರಂಕಾಂತ್, ತರಬೇತುದಾರರಾದ ಭರತ್‌ ಚೆಟ್ರಿ ಹಾಗೂ ಕ್ರಿಸ್‌ ಸಿರೆಲೋ ಪಾಲ್ಗೊಂಡು, ವಧು– ವರರಿಗೆ ಶುಭ ಹಾರೈಸಿದರು.

ಬೆಂಗಳೂರಿನಲ್ಲಿ ನಡೆಯುತ್ತಿರುವ ಹಾಕಿ ಶಿಬಿರದಲ್ಲಿ ಪಾಲ್ಗೊಂಡಿರುವ ಆಟಗಾರರು ಗೆಳೆಯನ ಆರತಕ್ಷತೆಯಲ್ಲಿ ಪಾಲ್ಗೊಳ್ಳಲು ಮಂಜಿನ ನಗರಿಗೆ ಆಗಮಿಸಿದ್ದರು.

ಭಾನುವಾರ ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥ ದೇವಸ್ಥಾನದ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ವಿವಾಹ ನಡೆದಿತ್ತು. ಸುನಿಲ್‌ ಕೊಡಗಿನ ಸೋಮವಾರಪೇಟೆಯವರು. ನಿಶಾ ಅವರು ಮಂಗಳೂರು ಕೊಂಚಾಡಿಯ ತಾರಾನಾಥ್‌ ಆಚಾರ್ಯ, ಸುನೀತಾ ದಂಪತಿ ಪುತ್ರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry