ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 6–3–1968

Last Updated 5 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಕಛ್ ತೀರ್ಪಿನ ವಿರುದ್ಧ ಅಪೀಲ್ ಸರಿಯಲ್ಲ: ಸ್ವರಣ್‌ ಸಿಂಗ್ ಸ್ಪಷ್ಟನೆ
ನವದೆಹಲಿ, ಮಾ. 5– ಕಛ್ ಪಂಚಾಯಿತಿ ಮಂಡಲಿ ತೀರ್ಪಿನ ವಿರುದ್ಧ ಅಂತರ್ರಾಷ್ಟ್ರೀಯ ನ್ಯಾಯಾಲಯಕ್ಕೆ ಅಪೀಲು ಹೋಗುವುದರಲ್ಲಿ ಯಾವ ಅರ್ಥವೂ ಇಲ್ಲವೆಂದು ರಕ್ಷಣಾ ಸಚಿವ ಶ್ರೀ ಸ್ವರಣ್‌ ಸಿಂಗ್ ಅವರು ಇಂದು ರಾಜ್ಯಸಭೆಯಲ್ಲಿ ಅತ್ಯಂತ ಸ್ಪಷ್ಟವಾಗಿ ತಿಳಿಸಿದರು.

ರಾಜ್ಯದಲ್ಲಿ ಏಕರೀತಿಯ ಪಠ್ಯಪುಸ್ತಕ
ಬೆಂಗಳೂರು, ಮಾ. 5–
ರಾಜ್ಯಾದ್ಯಂತ 1968–69ರಿಂದ ಶಾಲೆಗಳಲ್ಲಿ ಏಕರೀತಿಯ ಪಠ್ಯಪುಸ್ತಕಗಳನ್ನು ಗೊತ್ತುಪಡಿಸಲು ಕ್ರಮ ತೆಗೆದುಕೊಳ್ಳಲಾಗಿದೆಯೆಂದು ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡ ಅವರು ಇಂದು ವಿಧಾನಸಭೆಯಲ್ಲಿ ಪ್ರಕಟಿಸಿದರು.

ಪಬ್ಲಿಕ್ ಸರ್ವಿಸ್ ಕಮಿಷನ್ ಸದಸ್ಯರಾಗಿ ಶ್ರೀ ಟಿ.ವಿ. ರೆಡ್ಡಿ
ಬೆಂಗಳೂರು, ಮಾ. 5–
ರಾಜ್ಯದ ಪಬ್ಲಿಕ್ ಸರ್ವಿಸ್ ಕಮಿಷನ್ನಿನ ಸದಸ್ಯರಾಗಿ ಶ್ರೀ ಟಿ.ವಿ. ರೆಡ್ಡಿ ಅವರನ್ನು ರಾಜ್ಯಪಾಲರು ನೇಮಕ ಮಾಡಿದ್ದಾರೆ.

ಪುನರ್ಮಿಲನ ದ್ವೀಪ
ಮದ್ರಾಸ್, ಮಾ. 5–
ಪ್ರತ್ಯೇಕವಾದ ಕುಟುಂಬಗಳ ಪುನರ್ಮಿಲನಕ್ಕೆ ಕಡತೀವು ದ್ವೀಪವನ್ನು ಉಪಯೋಗಿಸಲಾಗುತ್ತಿದೆ.

ಭಾರತ–ಸಿಂಹಳದಲ್ಲಿ ಪ್ರತ್ಯೇಕವಾಗಿ ವಾಸಿಸುವ ಗಂಡ–ಹೆಂಡತಿ, ಪಾಸ್‌ಪೋರ್ಟ್, ವೀಸಾಗಳ ಅಗತ್ಯವಿಲ್ಲದೆ ಕಡತೀಪು ದ್ವೀಪದಲ್ಲಿ ವರ್ಷದ ಉತ್ಸವ ಕಾಲದಲ್ಲಿ ಸೇರುತ್ತಾರೆ.

ಸಿಂಹಳ ಸರ್ಕಾರ ವಿಧಿಸಿದ ನಿರ್ಬಂಧಗಳಿಂದಾಗಿ ಗಂಡ ಸಿಂಹಳದಲ್ಲೂ ಹೆಂಡತಿ ಭಾರತದಲ್ಲೂ ವಾಸಿಸುವ ಹಲವು ನಿದರ್ಶನಗಳಿವೆ.

ಲೋಕಪಾಲ, ಲೋಕ ಆಯುಕ್ತ ನೇಮಕ ಅನಗತ್ಯ: ರಾಜ್ಯ ಸರ್ಕಾರದ ಅಭಿಪ್ರಾಯ
ಬೆಂಗಳೂರು, ಮಾ. 5–
ಆಡಳಿತ ಸುಧಾರಣಾ ಸಮಿತಿಯ ಲೋಕಪಾಲ ಮತ್ತು ಲೋಕ ಆಯುಕ್ತ ನೇಮಕದ ಶಿಫಾರಸು ಅನಗತ್ಯವೆಂಬುದು ರಾಜ್ಯ ಸರ್ಕಾರದ ಅಭಿಪ್ರಾಯವಾಗಿದೆಯೆಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಮುಂಬೈ ಡಿ.ಐ.ಜಿ. ಅವರ ಪತ್ನಿಯ ಶಂಕಾಸ್ಪದ ಸಾವು
ಮುಂಬೈ, ಮಾ. 5–
ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್‌ರ ಪತ್ನಿ ಶ್ರೀಮತಿ ರೋಮಕದಂಬಾಂಡೆ ಅವರು ವರ್ಲಿಯಲ್ಲಿರುವ ಅವರ ನಿವಾಸದಲ್ಲಿ ಹಾಸಿಗೆಯಲ್ಲಿ ಸತ್ತು ಬಿದ್ದಿದ್ದು ಇಂದು ಬೆಳಿಗ್ಗೆ ಕಂಡು ಬಂದಿದೆ.

ಅವರಿಗೆ 38 ವರ್ಷ ವಯಸ್ಸಾಗಿತ್ತು. ಸೋಮವಾರದ ಸಂಜೆವರೆಗೂ ಅವರು ಆರೋಗ್ಯವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT