ನಿಷೇಧವಿದ್ದರೂ ಕಚೇರಿ ಬಳಸುತ್ತಿರುವ ಹಫೀಜ್!

ಭಾನುವಾರ, ಮಾರ್ಚ್ 24, 2019
31 °C

ನಿಷೇಧವಿದ್ದರೂ ಕಚೇರಿ ಬಳಸುತ್ತಿರುವ ಹಫೀಜ್!

Published:
Updated:
ನಿಷೇಧವಿದ್ದರೂ ಕಚೇರಿ ಬಳಸುತ್ತಿರುವ ಹಫೀಜ್!

ಲಾಹೋರ್: ಪಾಕಿಸ್ತಾನ ಸರ್ಕಾರ ನಿಷೇಧ ಹೇರಿದ್ದರೂ, ಜಮಾತ್ ಉದ್ ದವಾ (ಜೆಯುಡಿ) ಮುಖ್ಯಸ್ಥ ಹಾಗೂ ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯೀದ್ ತನ್ನ ಸಂಘಟನೆಯ ಕಚೇರಿಗಳನ್ನು ಈಗಲೂ ಬಳಸುತ್ತಿದ್ದಾನೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಪಾಕಿಸ್ತಾನ ಸರ್ಕಾರ ಹಫೀಜ್ ಮುಖ್ಯಸ್ಥನಾಗಿರುವ ಜೆಯುಡಿ ಹಾಗೂ ಫಲಾಹ್–ಐ–ಇನ್ಸಾನಿಯತ್‌ ಫೌಂಡೇಷನ್‌ನ (ಎಫ್‌ಐಎಫ್‌) ಕಚೇರಿಗಳನ್ನು ಕಳೆದ ತಿಂಗಳು ವಶಕ್ಕೆ ತೆಗೆದುಕೊಂಡಿತ್ತು. ಚಂಬೂರ್‌ಜಿ, ಮುರಿಡ್ಕೆ ಮಾರ್ಕಜ್ ಅಥವಾ ಇತರೆಡೆ ಇರುವ ಈ ಕಚೇರಿಗಳನ್ನು ಹಫೀಜ್ ಸಯೀದ್ ಆಗಲೀ, ಆತನ ಸಹಚರರಾಗಲೀ ತೊರೆದಿಲ್ಲ.

‘ಕಳೆದ ತಿಂಗಳು ಲಾಹೋರ್‌ನ ಕೇಂದ್ರ ಕಚೇರಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡ ಮೇಲೂ, ಸಯೀದ್ ಅಲ್ಲಿ ಮೂರು ಬಾರಿ ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಬೆಂಬಲಿಗರಿಗೆ ಧರ್ಮೋಪದೇಶ ನೀಡಿದ್ದಾನೆ. ಸಂಘಟನೆ ಸದಸ್ಯರು ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರವು ಅಧಿಕಾರಿಗಳನ್ನು ಅಲ್ಲಿ ನಿಯೋಜಿಸುವ ಕೆಲಸವನ್ನು ಮಾಡಬಲ್ಲದಷ್ಟೇ’ ಎಂದು ಪಂಜಾಬ್ ಸರ್ಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry