‘ಮೊದಲ ಹಂತದಲ್ಲಿ 40 ಬಸ್ಗಳನ್ನು ಒದಗಿಸಲು ಕಂಪನಿಯು ಒಪ್ಪಿದೆ. ವಾಹನದ ಪ್ರತಿ ಕಿ.ಮೀ. ಕಾರ್ಯಾಚರಣೆಗೆ ನಾವು ₹37.50 ಶುಲ್ಕವನ್ನು ಕಂಪನಿಗೆ ಪಾವತಿಸಬೇಕು. ವಿದ್ಯುತ್ ಹಾಗೂ ನಿರ್ವಾಹಕರ ವೆಚ್ಚ ₹17 ಆಗುತ್ತದೆ. ಚಾರ್ಜಿಂಗ್ ಪಾಯಿಂಟ್ಗಳನ್ನು ಅವರೇ ನಿರ್ಮಿಸಲಿದ್ದಾರೆ. ಚಾಲಕರನ್ನೂ ಅವರೇ ಒದಗಿಸಲಿದ್ದಾರೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ್ ಹೇಳಿದರು.