ಪರಿಸರ ಸ್ನೇಹಿ ಶಾಲೆಗಳ ಪಾತ್ರ ಬಹುಮುಖ್ಯ

ಬುಧವಾರ, ಮಾರ್ಚ್ 20, 2019
23 °C
ಪ್ರುಡೆನ್ಸ್ ಶಾಲೆಯ ಆವರಣದಲ್ಲಿ ಮಕ್ಕಳು ರೂಪಿಸಿದ ಧನ್ವಂತರಿ ವನ ಉದ್ಘಾಟಿಸಿದ ಅರಣ್ಯಾಧಿಕಾರಿ ಚಂದ್ರಪ್ಪ ಹೇಳಿಕೆ

ಪರಿಸರ ಸ್ನೇಹಿ ಶಾಲೆಗಳ ಪಾತ್ರ ಬಹುಮುಖ್ಯ

Published:
Updated:
ಪರಿಸರ ಸ್ನೇಹಿ ಶಾಲೆಗಳ ಪಾತ್ರ ಬಹುಮುಖ್ಯ

ತುಮಕೂರು: ಪರಿಸರ ಸ್ನೇಹಿ ಜೀವನ ಶೈಲಿ ರೂಪಿಸುವ ಶಾಲೆಗಳ ಪಾತ್ರ ಮಹತ್ತರವಾದುದು. ಶಿಕ್ಷಣಕ್ಕೆ ಒತ್ತು ನೀಡುವುದರೊಂದಿಗೆ ಸಮಾಜಮುಖಿಯಾಗಿ, ಪೋಷಕರ ಒಡನಾಡಿಯಾಗಿ ಶಾಲೆಗಳು ಅಭಿವೃದ್ಧಿ ಹೊಂದಬೇಕು ಎಂದು ಮಧುಗಿರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಪ್ಪ ಹೇಳಿದರು.

ಸೋಮವಾರ ನಗರದ ಹೊರವಲಯದ ಪ್ರುಡೆನ್ಸ್ ಶಾಲೆಯ ಆವರಣದಲ್ಲಿ ಮಕ್ಕಳೇ ಅಭಿವೃದ್ಧಿಪಡಿಸಿದ ಧನ್ವಂತರಿ ವನವನ್ನು ಹಣ್ಣಿನ ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಪರಿಸರ ಮತ್ತು ಅರಣ್ಯ ಸಂರಕ್ಷಣೆಯ ಬಗ್ಗೆ ಶಾಲಾ ಜೀವನದಲ್ಲಿಯೇ ಜಾಗೃತಿ ಮೂಡಿಸಬೇಕು. ಈ ಶಾಲೆಯಲ್ಲಿ ಆಲ, ಅತ್ತಿ, ಗೋಣಿ, ನೇರಣೆ, ಅರಳಿ, ಬೇವು, ಹೊಂಗೆ ಹೀಗೆ ಮುಂತಾದ ಸ್ಥಳೀಯ ಗಿಡಗಳಲ್ಲದೇ ಶ್ರೀಗಂಧ, ರಕ್ತಚಂದನ, ಹೊನ್ನೆ, ಬೀಟೆ ಗಿಡಗಳೂ ಸಹ ಇಲ್ಲಿ ಉತ್ಕೃಷ್ಟವಾಗಿ ಬೆಳೆಯುತ್ತಿವೆ. 30 ಜಾತಿಯ ಗಿಡಗಳು ಒಂದೇ ಸ್ಥಳದಲ್ಲಿ ಮಕ್ಕಳಿಗೆ ನೋಡಲು ಸಿಗುವುದು ವಿಶೇಷ ಎಂದು ನುಡಿದರು.

ಸಿದ್ಧರಬೆಟ್ಟದ ಗಿಡಮೂಲಿಕೆಗಳ ಆಗರ ಮತ್ತು ದೇವರಾಯನದುರ್ಗ ಪ್ರಕೃತಿ ಸೊಬಗಿನ ಕೇಂದ್ರವಾಗಿದೆ. ಇವುಗಳ ನಡುವೆ ಈ ಶಾಲೆಯು ಸಣ್ಣ ಅರಣ್ಯ ಕೇಂದ್ರವಾಗಿ ರೂಪುಗೊಂಡಿರುವುದು ವಿಶೇಷ ಎಂದು ಅಭಿಪ್ರಾಯಪಟ್ಟರು.

ಬೆನಕ ಎಜ್ಯುಕೇಶನ್ ಮತ್ತು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪ್ರೊ.ಜಿ.ಎಸ್ ರೇಣುಕಪ್ಪ ಮಾತನಾಡಿ, ‘ಶಾಲೆಯ ಧನ್ವಂತರಿ ವನದಲ್ಲಿ 180 ತಳಿಯ ಗಿಡಗಳಿವೆ. ಇದು ರೋಗಗಳ ನಿವಾರಕ ವನವಾಗಿದೆ. ಕಾಫಿ, ಏಲಕ್ಕಿ, ಶುಂಠಿ, ಮೆಣಸು, ಸಾಸಿವೆ, ದಾಲ್ಚಿನ್ನಿ ಸೇರಿದಂತೆ ಸಾಂಬಾರು ಪದಾರ್ಥ ಸಸ್ಯಗಳೂ ಇವೆ ಎಂದು ತಿಳಿಸಿದರು.

ಪ್ರಾಂಶುಪಾಲ ವಿಜಯಕುಮಾರ್ ಕುಲಕರ್ಣಿ, ಉಪ ಪ್ರಾಂಶುಪಾಲ ದಯಾನಂದ್ ಇದ್ದರು.

**

ದೇವರು ಧನ್ವಂತರಿ ವನದ ವಿಶೇಷ

ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಲೋಗಾನಂದನ್ ಮಾತನಾಡಿ,‘ ಗಿಡಮೂಲಿಕೆ ಮತ್ತು  ಹಣ್ಣು ಹಂಪಲುಗಳಿಂದ ಆರೋಗ್ಯ ವೃದ್ಧಿಸುವ ವಿಧಾನವನ್ನು ತಿಳಿಸಿಕೊಟ್ಟ ದೇವರು ಧನ್ವಂತರಿ. ಈ ಶಾಲೆಯಲ್ಲಿ ಮಕ್ಕಳು ಬೆಳೆಸಿದ ಹಣ್ಣಿನ ಗಿಡಗಳು ಮತ್ತು ಔಷಧೀಯ ಸಸ್ಯಗಳ ವನದಲ್ಲಿ ನಿಜವಾದ ದೇವರನ್ನು ಕಾಣುವಂತಾಗಿದೆ ಎಂದು ಹೇಳಿದರು.

ಈ ಧನ್ವಂತರಿ ವನದಲ್ಲಿ ಸುತ್ತಾಡುವುದೇ ಒಂದು ವಿಶೇಷ ಅನುಭವ. ಕೃಷಿ, ವಿಜ್ಞಾನ ಕೇಂದ್ರದಲ್ಲಿ ಈಚೆಗೆ ಅಭಿವೃದ್ಧಿಪಡಿಸಿರುವ ಸಿದ್ಧ ಹಲಸು ಮತ್ತು ಡ್ರಾಗನ್ ಫ್ರೂಟ್ ಸಸಿಗಳನ್ನು ಧನ್ವಂತರಿ ವನಕ್ಕೆ ಕೊಡುಗೆಯಾಗಿ ನೀಡಲಾಗು

ವುದು. ತಾಂತ್ರಿಕ ನೆರವನ್ನು ನೀಡಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry