ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ, ರೋಹಿತ್‌ಗೆ ₹ 7 ಕೋಟಿ: ಆಟಗಾರರ ನೂತನ ಕೇಂದ್ರಿಯ ಗುತ್ತಿಗೆ ಪಟ್ಟಿ ಪ್ರಕಟಿಸಿದ ಬಿಸಿಸಿಐ

Last Updated 7 ಮಾರ್ಚ್ 2018, 17:59 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ಆಟಗಾರರ ನೂತನ ಕೇಂದ್ರಿಯ ಗುತ್ತಿಗೆ ಪಟ್ಟಿ ಬಿಡುಗಡೆ ಮಾಡಿದೆ.

ಈ ಬಾರಿ ಆಟಗಾರರ ವಾರ್ಷಿಕ ಸಂಭಾವನೆಯನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದ್ದು ಹೊಸದಾಗಿ ಎ+ ಶ್ರೇಣಿಯನ್ನು ಸೇರ್ಪಡೆ ಮಾಡಲಾಗಿದೆ. ಈ ಶ್ರೇಣಿಯಲ್ಲಿ ವಿರಾಟ್‌ ಕೊಹ್ಲಿ ಸೇರಿದಂತೆ ಐದು ಮಂದಿ ಸ್ಥಾನ ಗಳಿಸಿದ್ದಾರೆ. ಇವರಿಗೆ ವಾರ್ಷಿಕ ₹ ಕೋಟಿ ಸಂಭಾವನೆ ಸಿಗಲಿದೆ.

ಯಾವ ಶ್ರೇಣಿಯಲ್ಲಿ ಯಾರು?

ಎ+ (₹ 7 ಕೋಟಿ): ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಶಿಖರ್‌ ಧವನ್‌, ಜಸ್‌ಪ್ರೀತ್‌ ಬೂಮ್ರಾ ಮತ್ತು ಭುವನೇಶ್ವರ್‌ ಕುಮಾರ್‌.

‘ಎ’ (₹ 5 ಕೋಟಿ): ಮಹೇಂದ್ರ ಸಿಂಗ್‌ ದೋನಿ, ಆರ್‌.ಅಶ್ವಿನ್‌, ರವೀಂದ್ರ ಜಡೇಜ, ವೃದ್ಧಿಮಾನ್‌ ಸಹಾ, ಮುರಳಿ ವಿಜಯ್‌, ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ.

‘ಬಿ’ (₹ 3 ಕೋಟಿ): ಉಮೇಶ್‌ ಯಾದವ್‌, ಕೆ.ಎಲ್‌.ರಾಹುಲ್‌, ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌, ಹಾರ್ದಿಕ್‌ ಪಾಂಡ್ಯ, ಇಶಾಂತ್‌ ಶರ್ಮಾ ಮತ್ತು ದಿನೇಶ್‌ ಕಾರ್ತಿಕ್‌.

ಸಿ’ (₹ 1ಕೋಟಿ): ಸುರೇಶ್‌ ರೈನಾ, ಕೇದಾರ್‌ ಜಾಧವ್‌, ಮನೀಷ್‌ ಪಾಂಡೆ, ಅಕ್ಷರ್‌ ಪಟೇಲ್‌, ಕರುಣ್‌ ನಾಯರ್‌, ಪಾರ್ಥಿವ್ ಪಟೇಲ್‌ ಮತ್ತು ಜಯಂತ್‌ ಯಾದವ್‌.

ಮಹಿಳೆಯರ ಗುತ್ತಿಗೆ ಪಟ್ಟಿ

‘ಎ’ (₹ 50 ಲಕ್ಷ): ಮಿಥಾಲಿ ರಾಜ್‌, ಜೂಲನ್‌ ಗೋಸ್ವಾಮಿ, ಹರ್ಮನ್‌ಪ್ರೀತ್‌ ಕೌರ್‌ ಮತ್ತು ಸ್ಮೃತಿ ಮಂದಾನ.

‘ಬಿ’ (₹ 30 ಲಕ್ಷ): ಪೂನಮ್‌ ಯಾದವ್‌, ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕವಾಡ, ಏಕ್ತಾ ಬಿಷ್ಠ್‌, ಶಿಖಾ ಪಾಂಡೆ ಮತ್ತು ದೀಪ್ತಿ ಶರ್ಮಾ.

‘ಸಿ’ (₹ 10 ಲಕ್ಷ): ಮಾನಸಿ ಜೋಶಿ, ಅನುಜಾ ಪಾಟೀಲ್‌, ಮೋನಾ ಮೆಷ್ರಮ್‌, ನುಜಾತ್ ಪರ್ವೀನ್‌, ಸುಷ್ಮಾ ವರ್ಮಾ, ಪೂನಮ್‌ ರೌತ್‌, ಜೆಮಿಮಾ ರಾಡ್ರಿಗಸ್‌, ಪೂಜಾ ವಸ್ತ್ರಾಕರ್‌ ಮತ್ತು ತಾನಿಯಾ ಭಾಟಿಯಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT