ನಟ ಜಿತೇಂದ್ರ ವಿರುದ್ಧ ಪ್ರಕರಣ ದಾಖಲು

7

ನಟ ಜಿತೇಂದ್ರ ವಿರುದ್ಧ ಪ್ರಕರಣ ದಾಖಲು

Published:
Updated:

ಚಂಡಿಗಡ/ಶಿಮ್ಲಾ: 47 ವರ್ಷಗಳ ಹಿಂದಿನ ಲೈಂಗಿಕ ದೌರ್ಜನ್ಯದ ಆರೋಪವೊಂದರಲ್ಲಿ ಬಾಲಿವುಡ್ ನಟ ಜಿತೇಂದ್ರ ವಿರುದ್ಧ ಪೊಲೀಸರು ಬುಧವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘1971ರಲ್ಲಿ ಹೋಟೆಲ್‌ನ ಕೊಠಡಿಯೊಂದರಲ್ಲಿ ಜಿತೇಂದ್ರ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ನನಗಾಗ 18 ವರ್ಷ. ಜಿತೇಂದ್ರಗೆ 28 ವರ್ಷ’ ಎಂದು 65 ವರ್ಷದ ಮಹಿಳೆ ದೂರು ನೀಡಿದ್ದಾರೆ. ಜಿತೇಂದ್ರ ತಮ್ಮ ತಂದೆಯ ಸೋದರಿಯ ಮಗ ಎಂದು ದೂರುದಾರರು ಹೇಳಿಕೊಂಡಿದ್ದಾರೆ.‌

ಎಫ್ಐಆರ್ ದಾಖಲಿಸುವಂತೆ ಹಿಮಾಚಲ ಪ್ರದೇಶ ಪೊಲೀಸ್ ಮಹಾನಿರ್ದೇಶಕರಿಗೆ ದೂರುದಾರರು ಕಳೆದ ತಿಂಗಳು ಇ–ಮೇಲ್ ಮಾಡಿದ್ದಾರೆ. ಈ ಆರೋಪ ನಿರಾಧಾರ ಎಂದು ಜಿತೇಂದ್ರ ಅವರ ವಕೀಲ ಹೇಳಿದ್ದಾರೆ.

ಹೋಟೆಲ್‌ನಲ್ಲಿ ಉಳಿದುಕೊಂಡ ಕುರಿತು ದಾಖಲೆ ಇದ್ದರೆ ಸಲ್ಲಿಸುವಂತೆ ದೂರುದಾರರಿಗೆ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry