ಲೋಕ ಕಲಾ ಮಹೋತ್ಸವ ಶುಕ್ರವಾರದಿಂದ

7

ಲೋಕ ಕಲಾ ಮಹೋತ್ಸವ ಶುಕ್ರವಾರದಿಂದ

Published:
Updated:

ಬೀದರ್: ‘ನೆರೆಯ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಕಂಗಟಿ, ಔರಾದ್‌ ತಾಲ್ಲೂಕಿನ ಸುಂದಾಳ, ಬೀದರ್‌ ತಾಲ್ಲೂಕಿನ ಚಾಂಬೋಳ ಹಾಗೂ ಭಾಲ್ಕಿ ತಾಲ್ಲೂಕಿನ ಧನ್ನೂರ(ಎಚ್) ಗ್ರಾಮಗಳಲ್ಲಿ ಮಾರ್ಚ್‌ 9 ರಿಂದ 11ರ ವರೆಗೆ ಅಖಿಲ ಭಾರತ ಲೋಕ ಕಲಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ’ ಎಂದು ರಾಷ್ಟ್ರೀಯ ಜನಪದ ಬುಡಕಟ್ಟು ಮತ್ತು ಕಲಾ ಪರಿಷತ್ತಿನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ತಿಳಿಸಿದರು.

ನವದೆಹಲಿಯ ಸಂಸ್ಕೃತಿ ಮಂತ್ರಾಲಯ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತು, ಕರ್ನಾಟಕ ಸಾಹಸ ಕಲಾ ಅಕಾಡೆಮಿ ಹಾಗೂ ಹೈದರಾಬಾದ್‌ನ ಭಾಷೆ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಮಹೋತ್ಸವದಲ್ಲಿ ತೆಲಂಗಾಣದ ಬೈಂದಾಲ ಕಥಾ, ಶರದ ಕಥಾ, ಒಗ್ಗೂ ಕಥಾ, ಚಿಂದು ಯಕ್ಷಗಾನಂ, ಕತಿ ಕಪರೂಲು ಕಲಾ ತಂಡಗಳು, ಮಹಾರಾಷ್ಟ್ರದ ಶೇತಕರಿ, ಕೋಳಿ ಕಲಾ ತಂಡ, ಮಧ್ಯಪ್ರದೇಶದ ಬಿದಾಯಿ ನೋರ್‍ತ ಕಲಾ ತಂಡ, ಛತ್ತೀಸಗಡದ ಪಂತಿ ನೃತ್ಯ ಕಲಾ ತಂಡ, ಕರ್ನಾಟಕದ ಪಠ ಕುಣಿತ, ಪೂಜಾ ಕುಣಿತ, ಡೊಳ್ಳು ಕುಣಿತ, ಲಂಬಾಣಿ ನೃತ್ಯ, ಕೋಲಾಟ ತಂಡಗಳು ಭಾಗವಹಿಸಿ ಜಾನಪದ ಕಲೆ ಪ್ರದರ್ಶಿಸಲಿವೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry