ದಶಕದ ಹಿಂದೆಯೇ ‘ಶುಭ’ ನುಡಿದಿದ್ದ ಎರ್ನಿ

ಶುಕ್ರವಾರ, ಮಾರ್ಚ್ 22, 2019
26 °C

ದಶಕದ ಹಿಂದೆಯೇ ‘ಶುಭ’ ನುಡಿದಿದ್ದ ಎರ್ನಿ

Published:
Updated:
ದಶಕದ ಹಿಂದೆಯೇ ‘ಶುಭ’ ನುಡಿದಿದ್ದ ಎರ್ನಿ

ಗುರುಗಾಂವ್‌: ಗಾಲ್ಫ್‌ ಕ್ರೀಡೆಯಲ್ಲಿ ಉತ್ತಮ ಹೆಸರು ಗಳಿಸುತ್ತಿರುವ ಭಾರತದ ಶುಭಂಕರ್‌ ಶರ್ಮಾ ಅವರ ಸಾಧನೆಯನ್ನು ವಿಶ್ವ ಚಾಂಪಿಯನ್‌ ಆಗಿದ್ದ ಎರ್ನಿ ಎಲ್ಸ್‌ ಒಂದು ದಶಕದ ಹಿಂದೆಯೇ ಗುರುತಿಸಿದ್ದರು.

ಶುಭಂಕರ್‌ ಸಾಧನೆಯ ಶಿಖರ ಏರಲಿದ್ದಾರೆ ಎಂದು ಭವಿಷ್ಯ ನುಡಿದಿದ್ದ ಎರ್ನಿ ಶುಭ ಕೋರಿದ್ದರು. ಶರ್ಮಾ ಅವರೇ ಈ ವಿಷಯವನ್ನು ಬಹಿರಂಗ ಮಾಡಿದ್ದಾರೆ. ಇಲ್ಲಿ ನಡೆಯಲಿರುವ ಇಂಡಿಯನ್‌ ಓಪನ್ ಚಾಂಪಿಯನ್‌ಷಿಪ್‌ಗೆ ಬಂದಿರುವ ಅವರು ಸುದ್ದಿಸಂಸ್ಥೆ ಜೊತೆ ಮಾತನಾಡಿದರು.

2008ರಲ್ಲಿ ನಡೆದ ತರಬೇತಿ ಶಿಬಿರವೊಂದರಲ್ಲಿ ತಮ್ಮನ್ನು ಎರ್ನಿ ಗುರುತಿಸಿದ್ದರು ಎಂದು ಅವರು ಹೇಳಿದರು. ಶರ್ಮಾ ಅವರಿಗೆ ಈಗ 21 ವರ್ಷ. ಮೂರು ತಿಂಗಳ ಹಿಂದೆ 462ನೇ ಕ್ರಮಾಂಕದಲ್ಲಿದ್ದ ಅವರು ಈಗ 66ನೇ ಕ್ರಮಾಂಕಕ್ಕೆ ಏರಿದ್ದಾರೆ.

ಯುರೋಪ್‌ ಟೂರ್‌ಗಳಲ್ಲಿ ಎರಡು ಪ್ರಶಸ್ತಿ ಗೆದ್ದಿರುವ ಅವರು ಮೆಕ್ಸಿಕೊದಲ್ಲಿ ನಡೆದಿದ್ದ ಡಬ್ಲ್ಯುಜಿಸಿಯಲ್ಲಿ ಉತ್ತಮ ಆಟ ಆಡಿದ್ದರು. ಮೆಕ್ಸಿಕೊದಲ್ಲಿ ನಡೆದಿದ್ದ ಪಿಜಿಎ ಟೂರ್‌ನಲ್ಲಿ ಜಂಟಿ ಒಂಬತ್ತನೇ ಸ್ಥಾನ ಗಳಿಸಿದ್ದರು.

‘ತರಬೇತಿ ಶಿಬಿರದಲ್ಲಿ ಎರ್ನಿ ನನ್ನನ್ನು ಪರೀಕ್ಷಿಸಿದರು. ನಾನು ಅವರ ಮನ ಗೆದ್ದೆ. ಅಭ್ಯಾಸ ಮಾಡುತ್ತಾ ಸಾಗಿದರೆ ಒಂದು ದಿನ ನೀನು ಹೆಸರಾಂತ ಆಟಗಾರ ಆಗುತ್ತಿ ಎಂದು ಅವರು ಆಗ ಹೇಳಿದರು. ಅವರ ಮಾತು ಈಗ ನಿಜ ಆಗುತ್ತಿದೆ’ ಎಂದು ಶುಭಂಕರ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry