ಮಹಿಳಾ ದಿನ: ಪುರುಷರಿಗೆ ಅಧಿಕ ದರ ವಿಧಿಸಿದ ದಿನ ಪತ್ರಿಕೆ

5

ಮಹಿಳಾ ದಿನ: ಪುರುಷರಿಗೆ ಅಧಿಕ ದರ ವಿಧಿಸಿದ ದಿನ ಪತ್ರಿಕೆ

Published:
Updated:
ಮಹಿಳಾ ದಿನ: ಪುರುಷರಿಗೆ ಅಧಿಕ ದರ ವಿಧಿಸಿದ ದಿನ ಪತ್ರಿಕೆ

ಪ್ಯಾರಿಸ್‌: ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಲಿಂಗಾಧಾರಿತ ವೇತನ ತಾರತಮ್ಯ ತಿಳಿಸಲು ಫ್ರೆಂಚ್‌ ಪತ್ರಿಕೆ ‘ಲಿಬರೇಷನ್‌’, ಗುರುವಾರ ಪುರುಷ ಓದುಗರಿಂದ ಶೇ 25ರಷ್ಟು ಅಧಿಕ ದರ ಪಡೆದುಕೊಂಡಿದೆ.

ಪತ್ರಿಕೆಯು ವಿಭಿನ್ನ ಮುಖಪುಟದ ಎರಡು ಆವೃತ್ತಿಯನ್ನು ಹೊರತಂದಿದ್ದು, ಒಂದು ಆವೃತ್ತಿಯನ್ನು ಮಹಿಳೆಯರಿಗೆ ಮೀಸಲಿರಿಸಿತ್ತು. ಅದಕ್ಕೆ ಸಾಮಾನ್ಯ ದರ ₹161.80 (2 ಯೂರೊ) ಹಾಗೂ ಪುರುಷರಿಗಾಗಿ ಪ್ರಕಟಿಸಿದ ಆವೃತ್ತಿಗೆ ₹202.25 (2.50 ಯೂರೊ) ನಿಗದಿ ಮಾಡಿತ್ತು.

‘ಕೆನಡಾದ ಮ್ಯಾಕ್ಲೀನ್‌ ಪತ್ರಿಕೆಯಿಂದ ಸ್ಫೂರ್ತಿ ಪಡೆದು ಈ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದು ಪತ್ರಿಕೆ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry