ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧಕಿಯರಿಗೆ ಸನ್‌ಪ್ಯೂರ್‌ ಪ್ರಶಸ್ತಿ

Last Updated 8 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮ ಸಮಾಜಮುಖಿ ಸೇವೆ ಮತ್ತು ಸಾಧನೆಯಿಂದ ಗಮನ ಸೆಳೆದಿರುವ 11 ಮಹಿಳಾ ಸಾಧಕಿಯರಿಗೆ ನಗರದಲ್ಲಿ ನಡೆದ ಸಮಾರಂಭದಲ್ಲಿ ‘ಸನ್‌ಪ್ಯೂರ್‌ ಸೂಪರ್‌ವುಮೆನ್‌’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ತಮ್ಮ ವಿಶಿಷ್ಟ ಕೆಲಸಗಳಿಂದ ಸಮಾಜದಲ್ಲಿ ಬದಲಾವಣೆ ತಂದು ಇತರರಿಗೆ ಮಾದರಿ ಮತ್ತು ಸ್ಫೂರ್ತಿಯಾಗಿರುವ ಮಹಿಳೆಯರ ಸಾಧನೆ ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಜತೆಗೆ ₹ 25 ಸಾವಿರ ನಗದು ಪುರಸ್ಕಾರ ನೀಡಲಾಗಿದೆ. ಸನ್‌ಪ್ಯೂರ್ ಬ್ರ್ಯಾಂಡ್‌ನ ಖಾದ್ಯ ತೈಲ ತಯಾರಿಸುವ  ಎಂ. ಕೆ. ಅಗ್ರೊಟೆಕ್‌ ಈ ಪ್ರಶಸ್ತಿ ಸ್ಥಾಪಿಸಿದೆ. ಸಂಸ್ಥೆಯ ನಿರ್ದೇಶಕ ಅಬ್ದುಲ್‌ ಎಚ್‌. ಖಾನ್‌ ಅವರು ಮಾತನಾಡಿದರು.

ಎಚ್‌ಐವಿ ಸೋಂಕು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಿಎಂಸಿಆರ್‌ಐನ ಪ್ರಾಧ್ಯಾಪಕಿ ಡಾ. ಅಸೀಮಾ,  ಸಾವಯವ ಕೃಷಿ ಉತ್ತೇಜಿಸುತ್ತಿರುವ ಪಿರಿಯಾಪಟ್ಟಣ ಕಣಗಾಲು ಗ್ರಾಮದ ಪದ್ಮಮ್ಮ, ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಬೆಂಗಳೂರಿನ ಗುಬ್ಬಲಾಳದ ಮಂಗಳಾ ಮೇತ್ರಿ, ಅಶಿಕ್ಷಿತ ಮಹಿಳೆಯರಿಗೆ  ನೆರವಾಗುತ್ತಿರುವ ಚಿತ್ರದುರ್ಗದ ಎಂ.ಆರ್‌.ವಿಜಯಲಕ್ಷ್ಮೀ, ಮಹಿಳೆಯರಿಗೆ  ಕರಕುಶಲ ತರಬೇತಿ ನೀಡಿ ಉದ್ಯಮಿಗಳಾಗಲು ನೆರವಾಗುತ್ತಿರುವ  ಶಿಕಾರಿಪುರ ತಾಲ್ಲೂಕಿನ ಮುದಿಗೌಡಕೇರಿಯ ಕಾಂಚನಾ,  ವಿಕಲಚೇತನ ಮಕ್ಕಳ ಕಂಪ್ಯೂಟರ್‌ ಶಿಕ್ಷಣ ಕಲಿಕೆಯಲ್ಲಿ ತೊಡಗಿಸಿಕೊಂಡಿರುವ ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯ ಕೆ.ಕೆ.ಕಾವ್ಯ, ಶಾಲೆಯಿಂದ ಹೊರಗುಳಿದ ಮಕ್ಕಳು ಶಿಕ್ಷಣ ಪಡೆಯಲು ನೆರವಾಗುತ್ತಿರುವ  ಮಂಗಳೂರಿನ ವಿಶಾಖ ಕಾಮತ್‌, ದಮನಿತ ಮಹಿಳೆಯರ ಪರ ದನಿಯೆತ್ತುವ  ಮೈಸೂರಿನ ಗೀತಾ ವೇಲುಮಣಿ, ಮಹಿಳಾ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ  ಶಿವಮೊಗ್ಗದ ಕೆ.ಪುಷ್ಪಲತಾ,   ಮಕ್ಕಳ ಹಕ್ಕುಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಬೆಂಗಳೂರಿನ ಎನ್‌.ಸುಜಾತಾ ಹಾಗೂ ಮಹಿಳೆಯರ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಮನೋರೋಗ ತಜ್ಞೆ ಡಾ.ಪದ್ಮಾಕ್ಷಿ ಲೋಕೇಶ್‌ ಅವರನ್ನು
ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT