ಕಂಪ್ಯೂಟರೀಕೃತ ಪರವಾನಗಿ

7

ಕಂಪ್ಯೂಟರೀಕೃತ ಪರವಾನಗಿ

Published:
Updated:

ನವದೆಹಲಿ: ದೇಶದಾದ್ಯಂತ ಚಾಲನಾ ಪರವಾನಗಿ ನೀಡುವ ಪ್ರಕ್ರಿಯೆಯನ್ನು ಶೀಘ್ರ ಕಂಪ್ಯೂಟರೀಕರಣ ಮಾಡಲಾಗುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಈ ವ್ಯವಸ್ಥೆಯಲ್ಲಿ ಚಾಲನಾ ಪರೀಕ್ಷೆ ವೇಳೆ ಮನುಷ್ಯ ಹಸ್ತಕ್ಷೇಪ ಇರುವುದಿಲ್ಲ. ತರಬೇತಿ ಪಡೆಯದವರಿಗೆ ಪರವಾನಗಿ ನೀಡುವುದನ್ನು ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಪ್ರತಿ ಜಿಲ್ಲೆಗೆ ಒಂದು, ಎಲ್ಲ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ‘ಮಾದರಿ ಚಾಲನಾ ತರಬೇತಿ ಕೇಂದ್ರ’ಗಳನ್ನು ಸ್ಥಾಪಿಸಲಾಗುತ್ತದೆ. ಪ್ರತಿ ಕೇಂದ್ರದ ಸ್ಥಾಪನೆಗೆ ₹1 ಕೋಟಿ ಮೀಸಲಿರಿಸಲಾಗುತ್ತದೆ. ಅಷ್ಟೇ ಮೊತ್ತವನ್ನು ರಾಜ್ಯ ಸರ್ಕಾರಗಳೂ ನೀಡಬೇಕಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry