ನಾಳೆ ಹಿಮಾಲಯಕ್ಕೆ ಹೋಗುತ್ತಾರಂತೆ ರಜನಿಕಾಂತ್‌

7

ನಾಳೆ ಹಿಮಾಲಯಕ್ಕೆ ಹೋಗುತ್ತಾರಂತೆ ರಜನಿಕಾಂತ್‌

Published:
Updated:
ನಾಳೆ ಹಿಮಾಲಯಕ್ಕೆ ಹೋಗುತ್ತಾರಂತೆ ರಜನಿಕಾಂತ್‌

ಚೆನ್ನೈ : ತಮಿಳುನಾಡಿನ ರಾಜಕೀಯ ರಂಗವನ್ನು ಇತ್ತೀಚೆಗೆ ಪ್ರವೇಶಿಸಿರುವ ಚಿತ್ರನಟ ರಜನಿಕಾಂತ್ ಅವರು ಹಿಮಾಲಯಕ್ಕೆ ಶನಿವಾರ ತೆರಳಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಒಂದು ದಶಕದ ಬಳಿಕ 67ರ ವಯೋಮಾನದ ಸಿನಿ ತಾರೆ ರಜನಿ ಹಿಮಾಲಯದ ದುನಗಿರಿ ಪ್ರದೇಶದ ಗುಹೆಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಗುಹೆಗಳಲ್ಲಿ ಮಹಾವತಾರ ಬಾಬಾಜಿ ಎಂಬ ಮುನಿಯ ಆತ್ಮ ನೆಲೆಸಿದೆ ಎಂಬ ನಂಬಿಕೆ ಇದೆ.

ಇದೊಂದು ಅಧ್ಯಾತ್ಮ ಪ್ರವಾಸವೇ ಅಥವಾ ಚಿತ್ರೀಕರಣಕ್ಕಾಗಿ ಪ್ರಯಾಣವೇ ಎಂಬುದು ಇನ್ನು ಖಚಿತಗೊಂಡಿಲ್ಲ.

ರಜನಿಕಾಂತ್‌ ಕಳೆದ ವರ್ಷ ತಮ್ಮ ಸ್ನೇಹಿತರೊಂದಿಗೆ ಒಡಗೂಡಿ ಭಾರತೀಯ ಯೋಗೋದ ಸತ್ಸಂಗ ಸೊಸೈಟಿ(ವೈಎಸ್‌ಎಸ್‌)ಯ ಶತಮಾನೋತ್ಸವ ನೆನಪಿನಲ್ಲಿ ಹಿಮಾಲಯದ ತಪ್ಪಲಿನಲ್ಲಿ ಒಂದು ಧ್ಯಾನ ಕೇಂದ್ರ ಸ್ಥಾಪಿಸಿದ್ದಾರೆ. ಪರಮಹಂಸ ಯೋಗಾನಂದ ಈ ಸೊಸೈಟಿಯ ಸ್ಥಾಪಕರು.

ರಜನಿಯ ಸಿನಿ ವೃತ್ತಿ ಗಮನಿಸುವುದಾದರೆ, ಅವರ ‘ಕಾಲಾ’ ಸಿನಿಮಾ ತೆರೆಗೆ ಬರಲು ಕಾಯುತ್ತಿದೆ. ಇದರಲ್ಲಿ ನಾನಾ ಪಾಟೆಕರ್‌, ಪಂಕಜ್‌ ತ್ರಿಪಾಠಿ, ಹುಮಾ ಖುರೇಷಿ ಸಹ ಅಭಿನಯಿಸಿದ್ದಾರೆ.
 

***********************
Superstar Rajinikanth is set to leave to Himalayas on Saturday, his publicist confirmed via a tweet on Friday.

For over a decade now, the 67-year-old star has been visiting the Dunagiri area near the Himalayas to meditate in the caves where Mahavatar Babaji, an ancient yogi who was believed to have an eternal body lived.

Is this yet another spiritual trip for the Kaala actor or is he going to shoot his next project?

Last year, Rajinikanth along with his friends built a meditation house on the foothills of the Himalayas to celebrate the 100 years of the Yogoda Satsanga Society of India (YSS), founded by Paramahamsa Yogananda. On the career front, Rajinikanth currently awaits the release of Kaala. The film also stars Nana Patekar, Pankaj Tripathi, Anjali Patil, Huma Qureshi and Samuthirakani in pivotal roles.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry