ಭವಿಷ್ಯ ನಿಧಿ ವ್ಯಾಪ್ತಿಗೆ ನೇಕಾರರು

7

ಭವಿಷ್ಯ ನಿಧಿ ವ್ಯಾಪ್ತಿಗೆ ನೇಕಾರರು

Published:
Updated:

ಬೆಂಗಳೂರು: ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ನೇಕಾರರನ್ನು ನೌಕರರ ಭವಿಷ್ಯ ನಿಧಿ ವ್ಯಾಪ್ತಿಯೊಳಗೆ ತರಲಾಗಿದೆ.

ರಾಜ್ಯ ಸರ್ಕಾರದ ಅಧೀನ ಸಂಸ್ಥೆಯಾದ ಈ ನಿಗಮದಲ್ಲಿ 5,000 ನೇಕಾರರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಬೇಕಾದ ಸಾಮಗ್ರಿ, ಯಂತ್ರೋಪಕರಣಗಳು ಹಾಗೂ ಆರ್ಥಿಕ ಸಹಾಯ ಒದಗಿಸುತ್ತಿದೆ.

ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಮನೀಷ್‌ ಅಗ್ನಿಹೋತ್ರಿ ಇತ್ತೀಚೆಗೆ ಹೊರಡಿಸಿದ ಆದೇಶದ ಪ್ರಕಾರ, ನಿಗಮದ ನೇಕಾರರು ಭವಿಷ್ಯ ನಿಧಿ, ನೌಕರರ ಪಿಂಚಣಿ ಯೋಜನೆ ಮತ್ತು ಉದ್ಯೋಗಿಗಳ ಠೇವಣಿ ಆಧಾರಿತ ವಿಮೆ ಯೋಜನೆಗಳ ಸೌಲಭ್ಯ ಪಡೆಯಬಹುದು. ನಿಗಮವು ₹ 20.36 ಕೋಟಿಗಳಷ್ಟು ಮೊತ್ತವನ್ನು ನೌಕರರ ಭವಿಷ್ಯನಿಧಿ ವಂತಿಗೆ ಪಾವತಿಸಬೇಕಿದೆ.

ಈ ಪ್ರಸ್ತಾವವು 20 ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಸಮಸ್ಯೆ ಬಗೆಹರಿದಿರುವುದರಿಂದ ನಿಗಮದ ನೇಕಾರರಿಗೆ ಅನುಕೂಲವಾಗಲಿದೆ ಎಂದು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ–2 ಹೇಮಾಂಗ್‌ ವೆಂಕಟೇಶ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry