ಬ್ಯಾಡ್ಮಿಂಟನ್‌ ಆಟಗಾರ ಸುಂಗ್‌ ನಿಧನ

7

ಬ್ಯಾಡ್ಮಿಂಟನ್‌ ಆಟಗಾರ ಸುಂಗ್‌ ನಿಧನ

Published:
Updated:
ಬ್ಯಾಡ್ಮಿಂಟನ್‌ ಆಟಗಾರ ಸುಂಗ್‌ ನಿಧನ

ಸೋಲ್‌: ದಕ್ಷಿಣ ಕೊರಿಯಾದ ಬ್ಯಾಡ್ಮಿಂಟನ್‌ ಆಟಗಾರ ಚುಂಗ್‌ ಜೇ ಸುಂಗ್‌ (35) ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಈ ವಿಷಯವನ್ನು ಕೊರಿಯಾ ಬ್ಯಾಡ್ಮಿಂಟನ್‌ ಸಂಸ್ಥೆ ಖಚಿತ‍ಪಡಿಸಿದೆ. ಚುಂಗ್‌ ಅವರಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದರು.

ಚುಂಗ್‌, 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಸಾಧನೆ ಮಾಡಿದ್ದರು. ‍ಪುರುಷರ ಡಬಲ್ಸ್‌ ವಿಭಾಗದಲ್ಲಿ ಲೀ ಯೊಂಗ್‌ ಡೇ ಜೊತೆಗೂಡಿ ಆಡಿದ್ದ ಅವರು ಕಂಚಿನ ಪದಕದ ಹೋರಾಟದಲ್ಲಿ ಮಲೇಷ್ಯಾದ ಕೋ ಕಿಯೆನ್‌ ಕೀಟ್‌ ಮತ್ತು ಟಾನ್‌ ಬೂನ್‌ ಹೆಯೊಂಗ್‌ ಅವರನ್ನು ಸೋಲಿಸಿದ್ದರು. ಅದೇ ವರ್ಷ ಅವರು ಬ್ಯಾಡ್ಮಿಂಟನ್‌ ಬದುಕಿಗೆ ವಿದಾಯ ಹೇಳಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry