‘ಜಾನಪದ ಕೋಗಿಲೆ’ ಬಿದರಕೆರೆ ತೋಪಜ್ಜಿ ನಿಧನ

7

‘ಜಾನಪದ ಕೋಗಿಲೆ’ ಬಿದರಕೆರೆ ತೋಪಜ್ಜಿ ನಿಧನ

Published:
Updated:
‘ಜಾನಪದ ಕೋಗಿಲೆ’ ಬಿದರಕೆರೆ ತೋಪಜ್ಜಿ ನಿಧನ

ಹಿರಿಯೂರು: ‘ಜಾನಪದ ಕೋಗಿಲೆ’ ಎಂದೇ ತಾಲ್ಲೂಕಿನಲ್ಲಿ ಖ್ಯಾತಿ ಪಡೆದಿದ್ದ ಬಿದರಕೆರೆ ತೋಪಜ್ಜಿ (95) ಗುರುವಾರ ರಾತ್ರಿ ತಮ್ಮ ತೋಟದ ಮನೆಯಲ್ಲಿ ನಿಧನರಾದರು.

ಅವರಿಗೆ ಸಾಕು ಮಗ ರಂಗಸ್ವಾಮಿ, ಸೊಸೆ ರಂಗಮ್ಮ ಇದ್ದಾರೆ. ಶುಕ್ರವಾರ ಸಂಜೆ ಅಂತ್ಯಕ್ರಿಯೆ ನೆರವೇರಿತು.

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಪಿ.ಆರ್. ತಿಪ್ಪೇಸ್ವಾಮಿ ಪ್ರತಿಷ್ಠಾನ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳಿಗೆ ತೋಪಜ್ಜಿ ಭಾಜನರಾಗಿದ್ದರು.

ಹಿರಿಯ ಜಾನಪದ ವಿದ್ವಾಂಸ ಜಿ.ಶಂ.ಪರಮಶಿವಯ್ಯ, ಕ.ರಾ.ಕೃಷ್ಣಸ್ವಾಮಿ ಮೊದಲಾದವರು ತೋಪಜ್ಜಿಯ ಹಾಡುಗಳನ್ನು ಸಂಗ್ರಹಿಸಿದ್ದರು. ಜಾನಪದ ಅಕಾಡೆಮಿ ಇವರ ಗೀತೆಗಳನ್ನು ಪ್ರಕಟಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry