ಭೂಮಿಯಿಂದ ಆಗಸದವರೆಗೆ: ಮೋದಿ ಬಣ್ಣನೆ

ಸೋಮವಾರ, ಮಾರ್ಚ್ 25, 2019
33 °C
ರಕ್ಷಣೆ, ಬಾಹ್ಯಾಕಾಶ, ಉನ್ನತ ತಂತ್ರಜ್ಞಾನದ ತನಕ ವಿಸ್ತರಿಸಿದ ಭಾರತ–ಫ್ರಾನ್ಸ್‌ ದ್ವಿಪಕ್ಷೀಯ ಸಂಬಂಧ

ಭೂಮಿಯಿಂದ ಆಗಸದವರೆಗೆ: ಮೋದಿ ಬಣ್ಣನೆ

Published:
Updated:
ಭೂಮಿಯಿಂದ ಆಗಸದವರೆಗೆ: ಮೋದಿ ಬಣ್ಣನೆ

ನವದೆಹಲಿ: ಭಾರತ ಮತ್ತು ಫ್ರಾನ್ಸ್‌ ನಡುವಿನ ಸಹಕಾರ ಯಾವುದೇ ಒಂದು ನಿರ್ದಿಷ್ಟ ವಿಷಯಕ್ಕೆ ಸೀಮಿತವಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ರಕ್ಷಣೆ, ಬಾಹ್ಯಾಕಾಶ, ಉನ್ನತ ತಂತ್ರಜ್ಞಾನ ಹೀಗೆ ಭೂಮಿಯಿಂದ ಆಕಾಶದವರೆಗೆ ವ್ಯಾಪಿಸಿರುವ ಎಲ್ಲ ಕ್ಷೇತ್ರಗಳಲ್ಲೂ ಎರಡೂ ರಾಷ್ಟ್ರಗಳು ಪರಸ್ಪರ ಸಹಕಾರದಿಂದ ಕೆಲಸ ಮಾಡಲಿವೆ ಎಂದರು.

ದ್ವಿಪಕ್ಷೀಯ ಸಂಬಂಧ ಕೇವಲ 20 ವರ್ಷ ಹಳೆಯದಾಗಿರಬಹುದು. ಆದರೆ, ಆಧ್ಯಾತ್ಮಿಕ ಸಂಬಂಧಕ್ಕೆ ಶತಮಾನಗಳ ಇತಿಹಾಸವಿದೆ ಎಂದರು.

‘ಭಾರತದಲ್ಲಿ ತಯಾರಿಸಿ’ ಯೋಜನೆಯ ಅಡಿ ರಕ್ಷಣಾ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಮುಂದಾಗಿರುವ ಫ್ರಾನ್ಸ್‌ ನಿರ್ಧಾರವನ್ನು ಸ್ವಾಗತಿಸಿದರು.

ಐತಿಹಾಸಿಕ ಬಾಂಧವ್ಯ: ಮ್ಯಾಕ್ರೋನ್‌: ಜಗತ್ತಿನ ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಫ್ರಾನ್ಸ್‌ ಮತ್ತು ಭಾರತ ಐತಿಹಾಸಿಕ ಬಾಂಧವ್ಯ ಹೊಂದಿವೆ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್‌ ಮ್ಯಾಕ್ರೋನ್‌ ಹೇಳಿದ್ದಾರೆ.

ಫ್ರಾನ್ಸ್‌ ಯುರೋಪ್‌ ಖಂಡದ ಹೆಬ್ಬಾಗಿಲು. ಯುರೋಪ್‌ ರಾಷ್ಟ್ರಗಳ ಪೈಕಿ ಫ್ರಾನ್ಸ್‌, ಭಾರತದ ಅತ್ಯುತ್ತಮ ಮಿತ್ರರಾಷ್ಟ್ರವಾಗಬೇಕು ಎಂಬುವುದು ತಮ್ಮ ಬಯಕೆಯಾಗಿದೆ ಎಂದರು.

ಸೇನಾ ಸಹಕಾರ, ಸಾಗರ ಭದ್ರತೆ ಹಾಗೂ ಭಯೋತ್ಪಾದನೆ, ತೀವ್ರವಾದದ ವಿರುದ್ಧದ ಹೋರಾಟದಲ್ಲಿ ಪರಸ್ಪರ ಎರಡೂ ಪ್ರಜಾಸತ್ತಾತ್ಮಕ ರಾಷ್ಟ್ರಗಳು ಕೈಜೋಡಿಸಲು ನಿರ್ಧರಿಸಿವೆ ಎಂದು ಮ್ಯಾಕ್ರೋನ್‌ ತಿಳಿಸಿದರು.

ಜಂಟಿ ಸಮರ: ದ್ವಿಪಕ್ಷೀಯ ಮಾತುಕತೆಯ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮ್ಯಾಕ್ರೋನ್ ಮತ್ತು  ಮೋದಿ, ಭಯೋತ್ಪಾದನೆ ಮತ್ತು ತೀವ್ರವಾದದ ವಿರುದ್ಧ ಜಂಟಿ ಸಮರ ಸಾರಿದರು. ಮುಂಬರುವ ದಿನಗಳಲ್ಲಿ ಹಿಂದೂ ಮಹಾಸಾಗರ ಪ್ರದೇಶವು ಜಾಗತಿಕ ಶಾಂತಿ, ಸ್ಥಿರತೆ, ಸಾಮರಸ್ಯ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಈ ನಾಯಕರು ಆಶಯ ವ್ಯಕ್ತಪಡಿಸಿದರು.

ಮತ್ತೊಮ್ಮೆ ಶಿಷ್ಟಾಚಾರ ಬದಿಗೊತ್ತಿದ ಪ್ರಧಾನಿ

ನವದೆಹಲಿ: ನಾಲ್ಕು ದಿನಗಳ ಭಾರತ ಪ್ರವಾಸಕ್ಕಾಗಿ ಶುಕ್ರವಾರ ರಾತ್ರಿ ಇಲ್ಲಿಗೆ ಬಂದಿಳಿದ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುವೆಲ್‌ ಮ್ಯಾಕ್ರೋನ್‌ ಅವರನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.

ಫ್ರಾನ್ಸ್‌ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ ಮ್ಯಾಕ್ರೋನ್‌ ಮತ್ತು ಅವರ ಪತ್ನಿ ಬ್ರಿಗಿಟ್‌ ಅವರನ್ನು ಸ್ವಾಗತಿಸಲು ಮೋದಿ ಮತ್ತೊಮ್ಮೆ ಶಿಷ್ಟಾಚಾರ ಬದಿಗೊತ್ತಿದರು.

ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ, ಅಬುಧಾಬಿಯ ರಾಜಕುಮಾರ ಮೊಹಮ್ಮದ್‌ ಬಿನ್‌ ಜಾಯೇದ್‌ ಅಲ್‌ ನಹ್ಯಾನ್‌, ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು, ಬಾಂಗ್ಲಾದೇಶದ ಪ್ರಧಾನಿ ಶೇಕ್‌ ಹಸಿನಾ, ಜೋರ್ಡನ್‌ ರಾಜ ಎರಡನೇ ಅಬ್ದುಲ್ಲಾ ಅವರನ್ನು ಪ್ರಧಾನಿ ಖುದ್ದಾಗಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದರು.

ಆದರೆ, ಕುಟುಂಬ ಸಮೇತ ಭಾರತಕ್ಕೆ ಬಂದಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರನ್ನು ಸ್ವಾಗತಿಸಲು ಪ್ರಧಾನಿ ವಿಮಾನ ನಿಲ್ದಾಣದಕ್ಕೆ ತೆರಳಿರಲಿಲ್ಲ.

***

* ಮಾರ್ಚ್‌ 12ರವರೆಗೂ ಭಾರತದ ಪ್ರವಾಸದಲ್ಲಿ ಮ್ಯಾಕ್ರೋನ್‌ ದಂಪತಿ

*ಭಾರತ –ಫ್ರಾನ್ಸ್‌ ಜಂಟಿಯಾಗಿ ಭಾನುವಾರ ಆಯೋಜಿಸಿರುವ ಹವಾಮಾನ ವೈಪರೀತ್ಯ ಮತ್ತು ಸೌರಶಕ್ತಿ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ನಾಯಕರು

* ಶೃಂಗಸಭೆಯ ಬಳಿಕ ಪತ್ನಿ ಬ್ರಿಗಿಟ್‌ ಜತೆ ಆಗ್ರಾದ ತಾಜ್‌ಮಹಲ್‌ಗೆ ಭೇಟಿ

* ಸೋಮವಾರ ವಾರಾಣಸಿಗೆ. ಗಂಗಾ ನದಿ ಸ್ವಚ್ಛತಾ ಕಾರ್ಯ ವೀಕ್ಷಣೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry