ಸಾವಿರಾರು ಭಕ್ತರಿಂದ ಸಾಯಿಬಾಬಾ ಪಾದುಕೆ ದರ್ಶನ

ಮಂಗಳವಾರ, ಮಾರ್ಚ್ 26, 2019
26 °C
ನ್ಯಾಷನಲ್ ಕಾಲೇಜು ಆವರಣದಲ್ಲಿ ಜನ್ಮಶತಮಾನೋತ್ಸವ

ಸಾವಿರಾರು ಭಕ್ತರಿಂದ ಸಾಯಿಬಾಬಾ ಪಾದುಕೆ ದರ್ಶನ

Published:
Updated:
ಸಾವಿರಾರು ಭಕ್ತರಿಂದ ಸಾಯಿಬಾಬಾ ಪಾದುಕೆ ದರ್ಶನ

ಬೆಂಗಳೂರು: ಅಖಿಲ ಭಾರತ ಶಿರಡಿ ಸಾಯಿ ಸಂಘದ ಆಶ್ರಯದಲ್ಲಿ ಶಿರಡಿ ಸಾಯಿಬಾಬಾ ಜನ್ಮಶತಮಾನೋತ್ಸವ ಬಸವನಗುಡಿಯ ನ್ಯಾಷನಲ್ ಕಾಲೇಜು ಆವರಣದಲ್ಲಿ ಶನಿವಾರ ವಿಜೃಂಭಣೆಯಿಂದ ಜರುಗಿತು.

ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಯಿಬಾಬಾ ಹಾಗೂ ಪಾದುಕೆಗಳ ದರ್ಶನ ಪಡೆದರು. ರಾಜ್ಯದ ಬೇರೆ ಭಾಗಗಳಿಂದ ಭಕ್ತರು ಬಂದಿದ್ದರು. ಭಾನುವಾರವೂ ಕಾರ್ಯಕ್ರಮ ನಡೆಯಲಿದ್ದು, ಉಚಿತ ಪ್ರವೇಶ ಕಲ್ಪಿಸಲಾಗಿದೆ.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾಯಿಬಾಬಾ ಪವಾಡ ಸಂಬಂಧಿತ ನಾಟಕಗಳನ್ನು ಪ್ರದರ್ಶಿಸಲಾಯಿತು. ಅವು ಭಕ್ತರ ಗಮನ ಸೆಳೆದವು.

ಸಂಘದ ಕಾರ್ಯದರ್ಶಿ ಆರ್.ಅಭಿಷೇಕ್, ‘ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಂಥ ಕಾರ್ಯಕ್ರಮ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಬೆಳಿಗ್ಗೆ 7.30 ರಿಂದ ರಾತ್ರಿ 10ರ ವರೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ’ ಎಂದರು.

ಹೆಚ್ಚಿನ ಮಾಹಿತಿಗೆ: 81234 03173.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry