ಬೆಳಗಾವಿಯಲ್ಲಿ 110 ಮೀಟರ್ ಎತ್ತರದಲ್ಲಿ ಹಾರಾಡಲಿದೆ ತ್ರಿವರ್ಣ ಧ್ವಜ

7

ಬೆಳಗಾವಿಯಲ್ಲಿ 110 ಮೀಟರ್ ಎತ್ತರದಲ್ಲಿ ಹಾರಾಡಲಿದೆ ತ್ರಿವರ್ಣ ಧ್ವಜ

Published:
Updated:
ಬೆಳಗಾವಿಯಲ್ಲಿ 110 ಮೀಟರ್ ಎತ್ತರದಲ್ಲಿ ಹಾರಾಡಲಿದೆ ತ್ರಿವರ್ಣ ಧ್ವಜ

ಬೆಳಗಾವಿ: ಇಲ್ಲಿನ ಕೋಟೆ ಕೆರೆಯ ದಂಡೆಯಲ್ಲಿ ಸ್ಥಾಪಿಸಿರುವ 110 ಮೀಟರ್ ಎತ್ತರದ ರಾಷ್ಟ್ರಧ್ವಜವನ್ನು ಸಮಾಜಕ್ಕೆ ಸಮರ್ಪಿಸುವ ಕಾರ್ಯಕ್ರಮ ಇದೇ 12ರಂದು ಬೆಳಿಗ್ಗೆ 9ಕ್ಕೆ ನಡೆಯಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಉದ್ಘಾಟಿಸುವರು ಎಂದು ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಫಿರೋಜ್ ಸೇಠ್ ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ತಿಳಿಸಿದರು.

ಈ ಸ್ತಂಭದಲ್ಲಿ 120x80 ಅಡಿ ಉದ್ದದ ತ್ರಿವರ್ಣ ಧ್ವಜವನ್ನು ಹಾರಿಸಲಾಗುವುದು.

ದೇಶದಲ್ಲಿಯೇ ಅತಿ ಎತ್ತರದ ರಾಷ್ಟ್ರ ಧ್ವಜ ಇದಾಗಿದೆ. ವಾಘಾ ಗಡಿಯಲ್ಲಿ 105 ಮೀಟರ್ ಎತ್ತರದಲ್ಲಿ ಬಾವುಟ ಹಾರಿಸಲಾಗುತ್ತಿದೆ. ಪುಣೆಯಲ್ಲಿರುವ ಧ್ವಜ ಸ್ತಂಭ 109 ಮೀಟರ್ ಇದೆ. ಹೀಗಾಗಿ ಬೆಳಗಾವಿಯದ್ದು ಎತಿ ಎತ್ತರದ ರಾಷ್ಟ್ರ ಧ್ವಜ ಸ್ತಂಭವಾಗಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry