ಪಾಕ್ ವಿದೇಶಾಂಗ ಸಚಿವರ ಮೇಲೆ 'ಶಾಯಿ', ನವಾಜ್ ಶರೀಫ್ ಮೇಲೆ ಶೂ ಎಸೆತ

ಮಂಗಳವಾರ, ಮಾರ್ಚ್ 19, 2019
33 °C

ಪಾಕ್ ವಿದೇಶಾಂಗ ಸಚಿವರ ಮೇಲೆ 'ಶಾಯಿ', ನವಾಜ್ ಶರೀಫ್ ಮೇಲೆ ಶೂ ಎಸೆತ

Published:
Updated:
ಪಾಕ್ ವಿದೇಶಾಂಗ ಸಚಿವರ ಮೇಲೆ 'ಶಾಯಿ', ನವಾಜ್ ಶರೀಫ್ ಮೇಲೆ ಶೂ ಎಸೆತ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಅಲ್ಲಿನ ರಾಜಕಾರಣಿಗಳು ತಮ್ಮ ಚುನಾವಣಾ ಕ್ಷೇತ್ರಗಳಿಗೆ ತೆರಳಿ ಜನರ ಬೆಂಬಲ ಪಡೆಯುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಭಾನುವಾರ ಲಾಹೋರ್‍‍ನಲ್ಲಿ ಪಾಕ್ ಪ್ರಧಾನಿ ನವಾಜ್ ಶರೀಫ್ ಜನರನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಓರ್ವ ವ್ಯಕ್ತಿ ಶರೀಫ್ ಅವರ ಮೇಲೆ ಶೂ ಎಸೆದಿದ್ದಾರೆ.

ಶನಿವಾರ ಸಿಯಾಲ್‍ಕೋಟ್‍ನಲ್ಲಿ ನಡೆದ ಕಾರ್ಮಿಕರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ಸಚಿವ ಖವಾಜಾ ಆಸೀಫ್ ಮೇಲೆ ವ್ಯಕ್ತಿಯೊಬ್ಬರು ಶಾಯಿ ಎರಚಿದ ಘಟನೆ ನಡೆದಿದೆ. ಅದೇ ದಿನ ನರೋವಲ್‍ನಲ್ಲಿ ಗೃಹ ಸಚಿವ ಅಹಸಾನ್ ಇಕ್ಬಾಲ್ ಅವರ ಮೇಲೆಯೂ ಶೂ ಎಸೆಯಲಾಗಿದೆ.

ಪಾಕ್ ಆಡಳಿತರೂಢ ಪಕ್ಷವಾದ ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್ ) ರಾಜಕಾರಣಿಗಳ ಮೇಲೆ ಈ ರೀತಿಯ ದಾಳಿ ನಡೆದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry