‘ಮೆಂಟಲ್‌ ಹೈ ಕ್ಯಾ’ ಎಂದ ಏಕ್ತಾ ಗರಂ ಆದ ಸಲ್ಮಾನ್‌

ಭಾನುವಾರ, ಮಾರ್ಚ್ 24, 2019
32 °C

‘ಮೆಂಟಲ್‌ ಹೈ ಕ್ಯಾ’ ಎಂದ ಏಕ್ತಾ ಗರಂ ಆದ ಸಲ್ಮಾನ್‌

Published:
Updated:
‘ಮೆಂಟಲ್‌ ಹೈ ಕ್ಯಾ’ ಎಂದ ಏಕ್ತಾ ಗರಂ ಆದ ಸಲ್ಮಾನ್‌

ಸೂಪರ್‌ಸ್ಟಾರ್‌ ಸಲ್ಮಾನ್‌ ಖಾನ್‌ ಮತ್ತೆ ಏಕ್ತಾ ಕಪೂರ್‌ ಮೇಲೆ ಗರಮ್ಮಾಗಿದ್ದಾರೆ. ಬಾಲಾಜಿ ಫಿಲಂಸ್‌ ಮೂಲಕ ಏಕ್ತಾ ಮಾಡಲು ಹೊರಟಿರುವ ಮನೋವೈಜ್ಞಾನಿಕ ಥ್ರಿಲ್ಲರ್‌ ವಸ್ತುವುಳ್ಳ ಹೊಸ ಸಿನಿಮಾ ‘ಮೆಂಟಲ್‌ ಹೈ ಕ್ಯಾ’ ಎಂಬ ಹೆಸರಿಟ್ಟಿರುವುದಾಗಿ ಪ್ರಕಟಿಸಿರುವುದು ಅವರ ಕೋಪಕ್ಕೆ ಕಾರಣ.

ಹಲವು ವರ್ಷಗಳಿಂದ ‘ಮೆಂಟಲ್‌’ ಎಂಬ ಶೀರ್ಷಿಕೆಯನ್ನು ಜೋಪಾನ ಮಾಡಿಕೊಂಡಿದ್ದರು ಸಹೋದರರಾದ ಸಲ್ಮಾನ್‌ ಖಾನ್‌ ಮತ್ತು ಸೊಹೈಲ್‌ ಖಾನ್‌. ಸಲ್ಲೂ ಅಭಿನಯದ ‘ಜೈ ಹೊ’, 2014ರಲ್ಲಿ ಸುದ್ದಿ ಮಾಡಿದ ಚಿತ್ರ. ಅಸಲಿಗೆ ಈ ಚಿತ್ರಕ್ಕೆ ಸೊಹೈಲ್‌ ಖಾನ್‌ ಮೊದಲು ಇಟ್ಟಿದ್ದ ಶೀರ್ಷಿಕೆ ‘ಮೆಂಟಲ್‌’. ಆದರೆ ಕೊನೆಗೆ ಹೆಸರು ಬದಲಾಯಿಸಲಾಯಿತು. ನಂತರ ಬಂದ ‘ಟ್ಯೂಬ್‌ಲೈಟ್‌’ಗೆ ಆ ಹೆಸರನ್ನು ಇಡುವ ಆಸೆ ಕಬೀರ್‌ ಖಾನ್ ಅವರಿಗಿತ್ತು. ಆಗಲೂ ಸಲ್ಲೂ ಭಾಯ್‌ ಒಪ್ಪಿಗೆ ನೀಡಿರಲಿಲ್ಲ. ಸಾಮಾನ್ಯವಾಗಿ ಸ್ಟಾರ್‌ ನಟರ ಸಿನಿಮಾಗಳಿಗೆ ಶೀರ್ಷಿಕೆ ಅಂತಿಮಗೊಳಿಸುವ ಮುನ್ನ ಅವರೊಂದಿಗೆ ಚರ್ಚಿಸುವುದು ಬಾಲಿವುಡ್‌ನಲ್ಲಿ ಚಾಲ್ತಿಯಲ್ಲಿರುವ ನಿಯಮ. ಆದರೆ ಏಕ್ತಾ ಕಪೂರ್‌ ಯಾವುದೇ ಸೂಚನೆ ಅಥವಾ ಕೋರಿಕೆಯನ್ನು ಮುಂದಿಡದೆ ‘ಮೆಂಟಲ್‌ ಹೈ ಕ್ಯಾ’ ಎಂಬ ಹೆಸರನ್ನು ಪ್ರಕಟಿಸಿರುವುದು ಸಲ್ಲೂ ಮತ್ತು ಸೊಹೈಲ್‌ ಪಿತ್ಥ ನೆತ್ತಿಗೇರುವಂತೆ ಮಾಡಿದೆ. ‘ಶೀರ್ಷಿಕೆ ಪ್ರಕಟಿಸುವ ಮುನ್ನ ಸೌಜನ್ಯಕ್ಕಾದರೂ ಏಕ್ತಾ ನಮ್ಮ ಬಳಿ ಮಾತನಾಡಬೇಕಿತ್ತು’ ಎಂಬುದು ಅವರ ವಾದ.

ಅಂದ ಹಾಗೆ, ‘ಮೆಂಟಲ್‌ ಕ್ಯಾ ಹೈ’ ಚಿತ್ರದಲ್ಲಿ ಕಂಗನಾ ರನೋಟ್‌ ಮತ್ತು ರಾಜ್‌ಕುಮಾರ್‌ ರಾವ್ ಅಭಿನಯಿಸಲಿದ್ದಾರೆ. ಕೆ.ರಾಘವೇಂದ್ರ ರಾವ್ ನಿರ್ಮಿಸಲಿರುವ ಈ ಚಿತ್ರದ ಕತೆ ಕನಿಕಾ ದಿಲ್ಲೊನ್‌ ಅವರದು. ಚಿತ್ರದ ಪೋಸ್ಟರ್‌ ಈಗಾಗಲೇ ಬಿಡುಗಡೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry