ಪ್ರವಾಸಿಗರ ಸಂಖ್ಯೆ ಹೆಚ್ಚಳ: ಖರ್ಗೆ

ಮಂಗಳವಾರ, ಮಾರ್ಚ್ 19, 2019
26 °C

ಪ್ರವಾಸಿಗರ ಸಂಖ್ಯೆ ಹೆಚ್ಚಳ: ಖರ್ಗೆ

Published:
Updated:
ಪ್ರವಾಸಿಗರ ಸಂಖ್ಯೆ ಹೆಚ್ಚಳ: ಖರ್ಗೆ

ಬೆಂಗಳೂರು: ರಾಜ್ಯದಲ್ಲಿ 2017ನೇ ಸಾಲಿನಲ್ಲಿ ದೇಶಿ ಪ್ರವಾಸಿಗರ ಸಂಖ್ಯೆ ಶೇ 38ರಷ್ಟು ಹೆಚ್ಚಾಗಿದೆ ಎಂದು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

‘ಕಳೆದ ವರ್ಷವನ್ನು ವನ್ಯಜೀವಿ ವರ್ಷ ಎಂದು ಘೋಷಿಸಲಾಗಿತ್ತು. 2016-17ರ ಅವಧಿಗೆ ಹೋಲಿಸಿದರೆ ಜಂಗಲ್ ರೆಸಾರ್ಟ್‌ಗಳ ಕೊಠಡಿಗಳ ಬಳಕೆ ಶೇ 9.6ರಷ್ಟು ಹೆಚ್ಚಾಗಿದೆ. ಹೊಸದಾಗಿ ಆರಂಭಗೊಂಡ ಕಾನನ ಶಿಬಿರಗಳು ಮತ್ತು ಟ್ರಯಲ್‌ಗಳಲ್ಲಿ ಬಳಕೆ ಪ್ರಮಾಣ

ಶೇ 98ರಷ್ಟು ಜಾಸ್ತಿಯಾಗಿದೆ. ಒಟ್ಟಾರೆ, ಜಂಗಲ್ ರೆಸಾರ್ಟ್‌ಗಳ ವರಮಾನ ಶೇ 5ರಷ್ಟು ಹೆಚ್ಚಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವರಮಾನ ಗಣನೀಯವಾಗಿ ಹೆಚ್ಚಾಗಿದೆ. ನಿಗಮದ ಹೋಟೆಲ್‌ಗಳ ವರಮಾನದಲ್ಲಿ ಶೇ 20.44 ರಷ್ಟು ಏರಿಕೆಯಾಗಿದೆ. ಹೋಟೆಲ್‌ಗಳ ವಾಸ್ತವ್ಯ ಪ್ರಮಾಣವು ಶೇ 20.44ರಿಂದ ಶೇ 43.7ಕ್ಕೆ ಏರಿಕೆ ಕಂಡಿದೆ’ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry