ವಿದ್ಯುತ್ ಟವರ್ ಏರಿ ಬೆದರಿಕೆ ಹಾಕಿದ ಕೈದಿ

7

ವಿದ್ಯುತ್ ಟವರ್ ಏರಿ ಬೆದರಿಕೆ ಹಾಕಿದ ಕೈದಿ

Published:
Updated:

ಹೈದರಾಬಾದ್: ಇಲ್ಲಿನ ಕೇಂದ್ರ ಕಾರಾಗೃಹದ ಕೈದಿ ಖಾಜಾ ಪಾಷಾ ಎಂಬಾತ ವಿದ್ಯುತ್ ವಿತರಣಾ ಟವರ್ ಮೇಲೆ ಹತ್ತಿ, ಜೈಲಿನ ಸಿಬ್ಬಂದಿಯನ್ನು ಕೆಲ ಸಮಯ ಆತಂಕಕ್ಕೀಡುಮಾಡಿದ್ದ.

ಕೊಲೆ ಪ್ರಕರಣದಲ್ಲಿ 2012ರಿಂದ ಜೈಲಿನಲ್ಲಿ ಈತ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ತನ್ನ ಮೇಲೆ ಸುಳ್ಳು ಆರೋಪ ಹೊರಿಸಿದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡುವಂತೆ ಈತ ಬೇಡಿಕೆ ಇಟ್ಟಿದ್ದ. ಇಲ್ಲದಿದ್ದಲ್ಲಿ ಟವರ್‌ನಿಂದ ಜಿಗಿಯುವುದಾಗಿ ಬೆದರಿಕೆ ಒಡ್ಡಿದ್ದ.

ಕೈದಿ ಹತ್ತಿದ್ದ ಗೋಪುರಕ್ಕೆ ತಕ್ಷಣ ವಿದ್ಯುತ್ ವಿತರಣೆಯನ್ನು ಸ್ಥಗಿತಗೊಳಿಸಲಾಯಿತು. ಮೂರು ಗಂಟೆಗಳ ಕಾಲ ಆತ ಟವರ್‌ ಮೇಲೆಯೇ ಕುಳಿತಿದ್ದ. ಕೊನೆಗೂ ತೀವ್ರ ಪ್ರಯತ್ನಪಟ್ಟು ಆತನನ್ನು ಕೆಳಗಿಳಿಸುವಲ್ಲಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾದರು ಎಂದು ಡಿಐಜಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry