ಮೊದಲ ಪಂದ್ಯದಲ್ಲಿ ಭಾರತ ತಂಡಕ್ಕೆ ಆಘಾತ

7
ಆಸ್ಟ್ರೇಲಿಯಾ ಮಹಿಳೆಯರ ಎದುರಿನ ಏಕದಿನ ಕ್ರಿಕೆಟ್‌ ಪಂದ್ಯ: ಬೋಲ್ಟನ್‌ ಮಿಂಚಿನ ಶತಕ

ಮೊದಲ ಪಂದ್ಯದಲ್ಲಿ ಭಾರತ ತಂಡಕ್ಕೆ ಆಘಾತ

Published:
Updated:
ಮೊದಲ ಪಂದ್ಯದಲ್ಲಿ ಭಾರತ ತಂಡಕ್ಕೆ ಆಘಾತ

ವಡೋದರಾ : ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ಮಹಿಳೆ ಯರ ತಂಡ ಆಸ್ಟ್ರೇಲಿಯಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಸೋಮವಾರ ಸೋತಿದೆ.

ಐಸಿಸಿ ಮಹಿಳೆಯರ ಚಾಂಪಿಯನ್‌ ಷಿಪ್‌ನ ಭಾಗವಾಗಿರುವ ಮೂರು ಪಂದ್ಯ ಗಳ ಸರಣಿಯ ಈ ಪಂದ್ಯದಲ್ಲಿ ಪ್ರವಾಸಿ ತಂಡದವರು ಎಂಟು ವಿಕೆಟ್‌ಗಳಿಂದ ಗೆದ್ದರು. ಶುಭಾರಂಭದ ನಿರೀಕ್ಷೆಯಲ್ಲಿದ್ದ ಆತಿಥೇಯರು ಕಳಪೆ ಬ್ಯಾಟಿಂಗ್ ಹಾಗೂ ಕ್ಷೇತ್ರರಕ್ಷಣೆಗೆ ಬೆಲೆ ತೆತ್ತರು.

ಮೊದಲು ಬ್ಯಾಟ್ ಮಾಡಿದ ಹರ್ಮನ್‌ಪ್ರೀತ್ ಬಳಗ 50 ಓವರ್‌ಗಳಲ್ಲಿ 200ರನ್‌ಗಳಿಗೆ ಆಲೌಟಾಯಿತು. ಉತ್ತರಿಸಿದ ಪ್ರವಾಸಿ ತಂಡ 32.1 ಓವರ್‌ಗಳಲ್ಲಿ ಗುರಿ ಸೇರಿತು.

ಕಳಪೆ ಬೌಲಿಂಗ್: ಆಸ್ಟ್ರೇಲಿಯಾ ತಂಡವನ್ನು ಕಟ್ಟಿಹಾಕಲು ಭಾರತದ ಬೌಲರ್‌ಗಳು ವಿಫಲರಾದರು. ಆರಂಭಿಕ ಆಟಗಾರ್ತಿ ನಿಕೋಲ್ ಬೋಲ್ಟನ್‌ (100, 101ಎ, 12ಬೌಂ) ಅಬ್ಬರದ ಶತಕ ಸಿಡಿಸಿದರು.

ಅವರಿಗೆ ಅಲಿಸಾ ಹೆಲೆ (38) ಉತ್ತಮ ಬೆಂಬಲ ನೀಡಿದರು. ನಾಯಕಿ ಮೆಗ್ ಲ್ಯಾನಿಂಗ್‌ (33) ರನೌಟ್ ಆದ ಬಳಿಕ ಎಲಿಸಾ ಪೆರಿ (ಅಜೇಯ 25) ತಂಡವನ್ನು ಜಯದ ದಡ ಸೇರಿಸಿದರು.

ಶಿಖಾ ಪಾಂಡೆ (38ಕ್ಕೆ1) ಅವರನ್ನು ಹೊರತುಪಡಿಸಿ ಉಳಿದ ಬೌಲರ್‌ಗಳಿಗೆ ಎದುರಾಳಿ ತಂಡದವರನ್ನು ನಿಯಂತ್ರಿ ಸಲು ಆಗಲಿಲ್ಲ. ದೀಪ್ತಿ ಶರ್ಮಾ ಆರು ಓವರ್‌ಗಳಲ್ಲಿ 47 ರನ್ ಬಿಟ್ಟುಕೊಡುವ ಮೂಲಕ ದುಬಾರಿಯಾದರು.

ಕೆಟ್ಟ ಆರಂಭ:‌ ಮಿಥಾಲಿ ರಾಜ್ ಅನುಪಸ್ಥಿತಿಯಲ್ಲಿ ಭಾರತ ತಂಡ ಸವಾಲಿನ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು. ಅಗ್ರ ಕ್ರಮಾಂಕದ ಬ್ಯಾಟ್ಸ್‌ವುಮನ್‌ಗಳು ಜವಾಬ್ದಾರಿಯಿಂದ ಆಡಲಿಲ್ಲ. ಪೂನಂ ರಾವತ್‌ 37 ರನ್ ಕಲೆ ಹಾಕಿದರೆ ನಾಯಕಿ ಹರ್ಮನ್‌ಪ್ರೀತ್ ಕೌರ್‌ ಕೇವಲ ಒಂಬತ್ತು ರನ್ ಗಳಿಸಿದರು.

ಏಳನೇ ಕ್ರಮಾಂಕದ ಬ್ಯಾಟ್ಸ್‌ವುಮನ್ ಸುಷ್ಮಾ ವರ್ಮಾ (41; 71ಎ, 3ಬೌಂ) ಹಾಗೂ ಪೂಜಾ ವಸ್ತ್ರಕಾರ್‌ (51, 56ಎ, 7ಬೌಂ, 1ಸಿ) ಭಾರತ ತಂಡ ಗೌರವದ ಮೊತ್ತ ಕಲೆ ಹಾಕಲು ನೆರವಾದರು. ಈ ಜೋಡಿ ಎಂಟನೇ ವಿಕೆಟ್‌ಗೆ 76 ರನ್ ಸೇರಿಸಿತು.

ಆಸ್ಟ್ರೇಲಿಯಾದ ಎಡಗೈ ಸ್ಪಿನ್ನರ್ ಜೆಸ್‌ ಜೊನಾಸನ್‌ ಭಾರತದ ಬ್ಯಾಟಿಂಗ್ ಬಳಗಕ್ಕೆ ತಡೆಯೊಡ್ಡಿದರು. 10 ಓವರ್‌ಗಳಲ್ಲಿ ಕೇವಲ 30 ರನ್ ನೀಡಿದ ಅವರು ನಾಲ್ಕು ವಿಕೆಟ್ ಕಬಳಿಸಿದರು. ಅಮಂದಾ ವೆಲಿಂಗ್ಟನ್‌ (24ಕ್ಕೆ3) ಕೂಡ ಉತ್ತಮ ದಾಳಿ ನಡೆಸಿದರು.

ಸಂಕ್ಷಿಪ್ತ ಸ್ಕೋರು: ಭಾರತ: 50 ಓವರ್‌ಗಳಲ್ಲಿ 200 (ಪೂನಮ್ ರಾವತ್‌ 37, ಸ್ಮೃತಿ ಮಂದಾನ 12, ಹರ್ಮನ್‌ ಪ್ರೀತ್ ಕೌರ್‌ 9, ದೀಪ್ತಿ ಶರ್ಮಾ 18, ಸುಷ್ಮಾ ವರ್ಮಾ 41, ಪೂಜಾ ವಸ್ತ್ರಕಾರ್ 51; ಜೆಸ್‌ ಜೊನಾಸನ್‌ 30ಕ್ಕೆ4, ಅಮಂದಾ ವೆಲಿಂಗ್ಟನ್‌ 24ಕ್ಕೆ3).

ಆಸ್ಟ್ರೇಲಿಯಾ: 32.1 ಓವರ್‌ಗಳಲ್ಲಿ 2 ವಿಕೆಟ್‌ಗೆ 202 (ನಿಕೋಲ್ ಬೋಲ್ಟನ್‌ ಅಜೇಯ 100, ಅಲಿಸಾ ಹೆಲೆ 38, ಎಲಿಸಾ ಪೆರಿ ಅಜೇಯ 25, ಮೆಗ್ ಲ್ಯಾನಿಂಗ್ 33). ಫಲಿತಾಂಶ: ಆಸ್ಟ್ರೇಲಿಯಾಕ್ಕೆ 8 ವಿಕೆಟ್‌ಗಳ ಜಯ.

ಪಂದ್ಯ ಶ್ರೇಷ್ಠ : ನಿಕೋಲ್ ಬೋಲ್ಟನ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry