ಪಾಕಿಸ್ತಾನದಲ್ಲಿ ‌ಟ್ವೆಂಟಿ–20 ಸರಣಿ ಆಡಲಿರುವ ವಿಂಡೀಸ್‌

ಶನಿವಾರ, ಮಾರ್ಚ್ 23, 2019
34 °C

ಪಾಕಿಸ್ತಾನದಲ್ಲಿ ‌ಟ್ವೆಂಟಿ–20 ಸರಣಿ ಆಡಲಿರುವ ವಿಂಡೀಸ್‌

Published:
Updated:
ಪಾಕಿಸ್ತಾನದಲ್ಲಿ ‌ಟ್ವೆಂಟಿ–20 ಸರಣಿ ಆಡಲಿರುವ ವಿಂಡೀಸ್‌

ಕರಾಚಿ : ವೆಸ್ಟ್‌ ಇಂಡೀಸ್‌ ತಂಡ ಏಪ್ರಿಲ್‌ ಮೊದಲ ವಾರದಲ್ಲಿ ಪಾಕಿಸ್ತಾನದ ವಿರುದ್ಧ ಮೂರು ಪಂದ್ಯಗಳ ಟ್ವೆಂಟಿ–20 ಕ್ರಿಕೆಟ್‌ ಸರಣಿ ಆಡಲಿದೆ.

ಈ ವಿಷಯವನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ (ಪಿಸಿಬಿ) ಮುಖ್ಯಸ್ಥ ನಜಾಮ್‌ ಸೇಥಿ ಸೋಮವಾರ ತಿಳಿಸಿದ್ದಾರೆ.

2009ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾ ತಂಡದ ಆಟಗಾರರಿದ್ದ ಬಸ್‌ ಮೇಲೆ ದಾಳಿ ನಡೆದಿತ್ತು. ಆ ನಂತರ ಕೆಲ ವರ್ಷಗಳ ಕಾಲ ಯಾವ ತಂಡವೂ ಪಾಕಿಸ್ತಾನದಲ್ಲಿ ಕ್ರಿಕೆಟ್‌ ಪಂದ್ಯಗಳನ್ನು ಆಡಿರಲಿಲ್ಲ.

ಪಿಸಿಬಿ ಮನವಿ ಮೇರೆಗೆ ಇತ್ತೀಚೆಗೆ ಐಸಿಸಿ, ವಿಶ್ವ ಇಲೆವನ್‌ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಿತ್ತು. ಬಳಿಕ ಜಿಂಬಾಬ್ವೆ ಮತ್ತು ಶ್ರೀಲಂಕಾ ತಂಡಗಳು ಲಾಹೋರ್‌ನ ಗಡಾಫಿ ಕ್ರೀಡಾಂಗಣ ದಲ್ಲಿ ಪಾಕಿಸ್ತಾನದ ವಿರುದ್ಧ ಸರಣಿ ಆಡಿದ್ದವು.

‘ವೆಸ್ಟ್‌ ಇಂಡೀಸ್‌ ತಂಡ ಮುಂದಿನ ತಿಂಗಳು ಪಾಕಿಸ್ತಾನದಲ್ಲಿ ಟ್ವೆಂಟಿ–20 ಕ್ರಿಕೆಟ್‌ ಸರಣಿ ಆಡಲು ಒಪ್ಪಿದೆ. ಸರಣಿಯ ಪಂದ್ಯಗಳು ಏಪ್ರಿಲ್‌ 1, 2 ಮತ್ತು 4 ರಂದು ಕರಾಚಿಯಲ್ಲಿ ನಡೆಯಲಿವೆ’ ಎಂದು ಸೇಥಿ ಟ್ವೀಟ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry